ಮಂಗಳೂರು: ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ವಾಯ್ಸ್ ಆಫ್ ಟ್ರಸ್ಟ್ ಮಂಗಳೂರು ಇದರ ಉದ್ಘಾಟನೆ ಹಾಗೂ ಇದರ ಅಧ್ಯಕ್ಷ ಝಹೀರ್ ಅಬ್ಬಾಸ್ ರವರ ಪದಗ್ರಹಣ ಸಮಾರಂಭ ಮತ್ತು ವಿಕಲ ಚೇತನರಿಗೆ ವೀಲ್ ಚೆಯರ್, ವಾಕಿಂಗ್ ಸ್ಟಿಕ್ ಮುಂತಾದ ಪರಿಕರಗಳ ವಿತರಣೆ ಕಾರ್ಯಕ್ರಮ ಸೆ.20 ರಂದು ಬುಧವಾರ ಮಂಗಳೂರಿನ ರಾವ್ & ರಾವ್ ಸರ್ಕಲ್ ಬಳಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ನೆರವೇರಿಸಲಿದ್ದಾರೆ. ಬಹು. ಇರ್ಷಾದ್ ಧಾರಿಮಿ ಅಲ್ ಅಝ್ಹರಿ ಮಿತ್ತಬೈಲ್ ಇವರು ಅಧ್ಯಕ್ಷತೆ ವಹಿಸಲಿದ್ದು,ಬಹು. ಶೇಕ್ ಮುಹಮ್ಮದ್ ಇರ್ಫಾನಿ ಫೈಝಿ ಅಲ್ ಅಝ್ಹರಿ ಇವರು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ್ ಕಾಮತ್, ರೆ.ಫಾ. ಡಾ.ರೋಕಿ ಡಿ’ಕುನ್ನ ಓ.ಎಫ್.ಎಂ.ಕ್ಯಾಪ್ ಸೂಪರ್ವೈಸರ್, ಸೈಂಟ್ ಆನ್ಸ್ ಪ್ರಿಯಾರಿ,ಬಹು. ವೈ.ಪಿ.ಲ್. ಅಹ್ಮದ್ ಮೊಹಿದಿನ್ ಲಬ್ಬೈ ಮುತ್ತುಪೇಟೆ, ಜೆ.ಆರ್.ಲೋಬೋ ಮಾಜಿ ಶಾಸಕರು,ಐವನ್ ಡಿ’ ಸೋಜಾ ಮಾಜಿ ಶಾಸಕರು,ವಿಧಾನ ಪರಿಷತ್ತ್, ಕರ್ನಾಟಕ, ಕೆ.ಅಶ್ರಫ್ ಮಾಜಿ ಮೇಯರ್, ಮಂಗಳೂರು,ಯೋಗೀಶ್ ಶೆಟ್ಟಿ ಅಧ್ಯಕ್ಷರು, ತುಳುನಾಡ ರಕ್ಷಣಾ ವೇದಿಕೆ,ಜ.ಬಿ.ಎಸ್.ಇಮ್ತಿಯಾಝ್ ಸ್ಥಾಪಕಾಧ್ಯಕ್ಷರು, ಅಲ್ ಹಕ್ ಫೌಂಡೇಶನ್, ಬಿ.ಕೆ.ಇಮ್ತಿಯಾಝ್
ಅಧ್ಯಕ್ಷರು,ಬೀದಿ ಬದಿ ವ್ಯಾಪಾರಸ್ಥರ ಸಂಘ, ಮಂಗಳೂರು, ಓಸ್ವಾಲ್ ಪುರ್ಟಾಡೊ
ಅಧ್ಯಕ್ಷರು, ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್, ಮಂಗಳೂರು,ರವೂಫ್ ಬಂದರ್,ಸ್ಥಾಪಕಾಧ್ಯಕ್ಷರು
ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್, ಮಂಗಳೂರು ಇವರು ಪಾಲ್ಗೊಳ್ಳಲಿದ್ದಾರೆ.