ಬೆಳ್ತಂಗಡಿ: ತಾಲೂಕಿನ ಕಾಯರ್ತಡ್ಕದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿ, ಕಳೆಂಜ ಗ್ರಾಮದ ಉದ್ರಾಜೆ ನಿವಾಸಿ, ಭಾರತಿ ಎಸ್. (42) ಜೂ. 13ರಂದು ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದ ಅವರು ಹೃದಯಾಘಾತ ಕ್ಕೊಳಗಾಗಿದ್ದರು. ತತ್ಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಮೇಲಂತಬೆಟ್ಟು ಕಾಲೇಜಿನ ಉಪನ್ಯಾಸಕ ಡಾ| ಕುಶಾಲಪ್ಪ ಎಸ್. ಅವರ ಪತ್ನಿಯಾಗಿರುವ ಭಾರತಿ ಅವರು ಕಳೆದ 8 ವರ್ಷಗಳಿಂದ ಕಾಯರ್ತಡ್ಕದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಪತಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
