ಸುಳ್ಯ: 2023ರ ಶೈಕ್ಷಣಿಕ ವರ್ಷದ ಯುವಿಕಾ-ಕಾರ್ಯಕ್ರಮಕ್ಕೆ ಸುಳ್ಯದ ತನ್ವಿ ಮನುಜೇಶ್ ರನ್ನು ಇಸ್ರೋ ಸಂಸ್ಥೆ ಯುವ ವಿಜ್ಞಾನಿಯಾಗಿ ಆಯ್ಕೆ ಮಾಡಿದೆ.
ಇಸ್ರೋ ಪ್ರಸಕ್ತ ವರ್ಷ ದೇಶದಲ್ಲಿ ಆಯ್ಕೆ ಮಾಡಿದ 350 ವಿದ್ಯಾರ್ಥಿಗಳಲ್ಲಿ ಮೊದಲಿಗಳಾಗಿ ತನ್ವಿ ಆಯ್ಕೆ ಯಾಗಿರುತ್ತಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಶಾಲಾ ಮಕ್ಕಳಿಗಾಗಿ ಇರುವ ‘ಯುವ ವಿಜ್ಞಾನಿ ಪುರಸ್ಕಾರ ‘ಯುವಿಕಾ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ. ಇದು ಯುವ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಹಾಗು ಇತರ ಉದಯೋನ್ಮುಖ ಪ್ರವೃತ್ತಿಗಳಲ್ಲಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅಪ್ಲಿಕೇಶನ್‍ಗಳ ಕುರಿತು ಮೂಲಭೂತ ಜ್ಞಾನವನ್ನು ನೀಡುತ್ತದೆ. ಈ ಕಾರ್ಯಕ್ರಮವನ್ನು ‘ಕ್ಯಾಚ್ ದೆಮ್ ಯಂಗ್’ ಎಂಬ ಶೀರ್ಷಿಕೆ ಅಡಿಯಲ್ಲಿ ಇಸ್ರೋ ರೂಪಿಸಿದೆ.
ಮುಡಿಪು ಜವಾಹರ್ ನವೋದಯ ವಿದ್ಯಾಲಯದಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ತನ್ವಿ ಮನುಜೇಶ್ 2023ರ ಶೈಕ್ಷಣಿಕ ವರ್ಷದ ‘ಯುವಿಕ’ ಕಾರ್ಯಕ್ರಮಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಸುಳ್ಯದ ಕುರುಂಜಿ ಭಾಗ್ ನಿವಾಸಿ ಹಾಗು ವಿವೇಕಾನಂದ ತಾಂತ್ರಿಕ ಮಹಾ ವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಮನುಜೇಶ್ ಬಿಜೆ ಮತ್ತು ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಎಂ.ಆರ್. ದಂಪತಿಯ ಪುತ್ರಿ.