ದಿನಾಂಕ: 19-10-2023 ರಂದು ತುಳುನಾಡರಕ್ಷಣಾ ವೇದಿಕೆ ಕಾಪು ಘಟಕದ ವತಿಯಿಂದ ಉಡುಪಿ ಜಿಲ್ಲಾ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ, ಕಾಪು ಮಹಿಳಾ ಘಟಕ ಅದ್ಯಕ್ಷೆ ಅನುಸೂಯ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಯನ್ನು ಭೇಟಿ ಯಾಗಿ ಕಾಪು ತಾಲೂಕು ಕಾರ್ಯನಿರ್ವಾಹಣಾದಿಕಾರಿ (ಇ. ಓ) ಶೀಘ್ರವಾಗಿ ನೇಮಕ ಗೊಳಿಸುವಂತೆ ಮನವಿ ಸಲ್ಲಿಸಿದರು.
ಇಡೀ ತಾಲೂಕಿನ ಹೊಣೆಗಾರಿಕೆ (ಇ. ಓ ) ಗಳ ಮೇಲಿರುತ್ತದೆ. ಈ ಹುದ್ದೆಗಳು ಖಾಲಿ ಬಿದ್ದರೆ ಅಭಿವೃದ್ಧಿಗೆ ತೊಡಕಾಗುವುದು ಸಹಜ ಹೊಸ ತಾಲೂಕುಗಳಲ್ಲಿ ಇ. ಓ. ನೇಮಕ ಆಗಿಲ್ಲ ಜೊತೆಗೆ ಇ. ಓ. ಗಳ ವರ್ಗಾವಣೆ ಬಳಿಕ ಹೊಸ ನಿಯೋಜನೆಗಳಾಗಿಲ್ಲ ಹೀಗಾಗಿ ಅವುಗಳ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ನೀಡಲಾಗುತ್ತಿದೆ. ಸಣ್ಣ ಹುದ್ದೆಗಳಾದಿದ್ದರೆ ಎರಡು ಮೂರು ಜವಾಬ್ದಾರಿಗಳನ್ನು ಒಬ್ಬರಿಗೆ ನಿರ್ವಹಿಸುವುದು ಕಷ್ಟವಲ್ಲ, ಆದರೆ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಮುಖ್ಯಸ್ಥನಂತಿರುವ ಇ. ಓ. ಮತ್ತೊಂದು ತಾಲೂಕಿನ ಅದೇ ಜವಾಬ್ದಾರಿಯನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಒಂದಲ್ಲ ಒಂದು ಸಮಸ್ಯೆ ತಲೆದೋರುತಲೆ ಇರುತ್ತವೆ. ಪ್ರಸ್ತುತ ಎಲ್ಲಾ ಗ್ರಾಮ ಪಂಚಾಯತ್ ಗಳ ಎರಡನೇ ಅವಧಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು ಪ್ರಾರಂಭದಲ್ಲಿ ಸಮಸ್ಯೆಗಳು ಹೆಚ್ಚಿರುತ್ತವೆ. ಇವೆಲ್ಲವನ್ನು ನಿರ್ವಹಿಸುವ ಜವಾಬ್ದಾರಿ ಇ.ಓ. ಗಳದ್ದು ದೊಡ್ಡ ತಾಲೂಕುಗಳಲ್ಲಿ ಗ್ರಾಮ ಪಂಚಾಯಿತಿಗಳ ಸಂಖ್ಯೆಯು ಹೆಚ್ಚು ಇರುತ್ತದೆ ಜೊತೆಗೆ ಒಂದಿಷ್ಟು ಇಲಾಖೆಗಳಿಗೆ ಕೆ2 ಮೂಲಕ ಅನುದಾನ, ವೇತನ ಪಾವತಿ ಜವಾಬ್ದಾರಿಯೂ ಇ.ಓ. ಗಳಾದ್ದಾಗಿದೆ. ಇದೀಗ ಕಾಪು ಹಾಗೂ ಉಡುಪಿ ತಾಲೂಕಿಗೆ ಒಬ್ಬರೇ ವ್ಯಕ್ತಿ ಕಾರ್ಯನಿರ್ವಹಣೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು ಇದರಿಂದಾಗಿ ಅಧಿಕಾರಿಗೆ ಹೆಚ್ಚು ಒತ್ತಡ ಉಂಟಾಗುವುದು ಜೊತೆಗೆ ಜನರ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವುದು ಕಷ್ಟ ಸಾಧ್ಯವಾಗಿದೆ ಇದರಿಂದಾಗಿ ಜನರು ಸರಕಾರವನ್ನು ದೂರವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರಕಾರ ಉತ್ತಮ ಕೆಲಸವನ್ನು ನಿರ್ವಹಿಸಿದ್ದರೂ ಕೂಡ ಜನಸಾಮಾನ್ಯರಿಗೆ ಶೀಘ್ರದಲ್ಲಿ ಸ್ಪಂದನೆ ದೊರಕದಿದ್ದಲ್ಲಿ ಜನಸಾಮಾನ್ಯರು ತುಂಬಾ ಕಷ್ಟಪಡುವಂತಾಗುತ್ತದೆ. ಆದುದರಿಂದ ಕೂಡಲೇ ಕಾರ್ಯನಿರ್ವಹಣಾದಿಕಾರಿ ನೇಮಕಾತಿ ಮಾಡಬೇಕಾಗಿ ತುಳುನಾಡ ರಕ್ಷಣಾ ವೇದಿಕೆ ಮುಖಂಡರು ಒತ್ತಾಯಿಸಿದರು.
ತುಳುನಾಡ ರಕ್ಷಣಾ ವೇದಿಕೆ ಕಾಪು ಮಹಿಳಾ ಘಟಕದ ಗೌರವ ಅಧ್ಯಕ್ಷರಾದ ರೋಶಿನಿ ಬಲ್ಲಾಳ್, ಉಪಾಧ್ಯಕ್ಷರಾದ ಸವಿತಾ ನಾಯಕ್, ಕಾಪು ಮುಖಂಡರುಗಳಾದ ಕೀರ್ತಿ ಶೆಟ್ಟಿ, ರೋಹಿಣಿ ಶೆಟ್ಟಿ, ದೀಪಾ ಶೆಟ್ಟಿ, ಸುನೀತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.