Thursday, October 10, 2024
spot_img
More

    Latest Posts

    ಮಂಗಳೂರು ಲೇಡಿಹಿಲ್ ಈಜುಕೊಳದಲ್ಲಿ ನೀರಲ್ಲಿ ಮುಳುಗಿ ವ್ಯಕ್ತಿ ಮೃತ್ಯು

    ಮಂಗಳೂರು : ಮಂಗಳೂರು ನಗರದ ಲೇಡಿಹಿಲ್ ಬಳಿಯ ಮಂಗಳೂರು ಮಹಾನಗರಪಾಲಿಕೆಯ ಈಜುಕೊಳದಲ್ಲಿ ವ್ಯಕ್ತಿಯೋರ್ವರು ಮುಳುಗಿ ಸಾವನ್ನಪಿದ್ದಾರೆ.

    ಮಂಗಳವಾರ ಸಂಜೆ 4 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಮೃತನನ್ನು ಬಿಹಾರ ಮೂಲದ  ಅಭಿಷೇಕ್ (35) ಎಂದು ಗುರುತ್ತಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ನಿರ್ವಹಣೆ ಮಾಡುವ ಈ ಈಜುಕೊಳದಲ್ಲಿ ಈಜುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ, 15 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಅಭಿಷೇಕರನ್ನು ಈಜುಕೊಳದ ಜೀವರಕ್ಷಕರಾದ ರಾಜೇಂದ್ರ ಮತ್ತು ಪುಂಡಲಿಕ್ ಅವರು ಕೂಡಲೇ ಮೇಲಕ್ಕೆ ತಂದಿದ್ದರೂ. ಸ್ಥಳದಲ್ಲಿದ್ದ ಪ್ರೊ, ನರೇಂದ್ರ ನಾಯಕ್ ಮತ್ತು ಇತರರು ಸಿಪಿಆರ್ ಮಾಡಿ ಉಸಿರಾಡುವಂತೆ ಮಾಡಿದ ಪ್ರಯತ್ನ ವಿಫಲವಾಯಿತು ಎಂದು ಹೇಳಲಾಗಿದೆ.  ಅಭಿಷೇಕ್ ಸಾವು ನೀರಲ್ಲಿ ಉಸಿರುಗಟ್ಟಿ ಸಂಭವಿಸಿದೆಯೇ ಅಥವಾ ಹೃದಯಾಘಾತದಿಂದ ಸಂಭವಿಸಿದೆಯೆ ಎಂದು ತನಿಖೆಯಿಂದ ತಿಳಿದುಬರಬೇಕಿದೆ.  ಬರ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ಹು ಆಸ್ಪತ್ರೆಗೆ ರವಾನೆ ಮಾಡಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss