ದಿನಾಂಕ 27-07-2022 ರಂದು ಉಡುಪಿ ಹಾಗೂ ಮಣಿಪಾಲ್ ಝೋನ್ ನ ಡೆಲಿವೆರಿ ಬಾಯ್ಸ್ (ತುಳುನಾಡಿನ ಕಾರ್ಮಿಕರು) ಸುಮಾರು ವರ್ಷಗಳಿಂದ ಕೆಲಸಮಾಡಿಕೊಂಡು ಬಂದಿರುವಂತಹ ಸ್ವಿಗ್ಗಿ (SWIGGY) ಸಂಸ್ಥೆಯಿಂದ ನಮಗೆ ಹಲವು ಸಮಸ್ಯೆಗಳು ಆಗಿರುತ್ತದೆ ಆದುದರಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ತಮ್ಮ ಬೇಡಿಕೆಗಳನ್ನು ಕಳೆದ ಬಾರಿ ಬಗೆಹರಿಸಿದಂತೆ ಈ ಬಾರಿಯೂ ತಮ್ಮ ಸುಮಾರು ಹನ್ನೆರಡು ಬೇಡಿಕೆಗಳನ್ನು ಬಗೆಹರಿಸಿ ಕೊಡುವಂತೆ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರಿಗೆ ಮನವಿಯನ್ನು ನೀಡಿದರು.
ಮನವಿಯನ್ನು ಸ್ವಿಕರಿಸಿದ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಇವರುಗಳ ಕಳೆದ ವರ್ಷದ ಬೇಡಿಕೆಯನ್ನು ಸ್ವಿಗ್ಗಿ(SWIGGY) ಸಂಸ್ಥೆಯ ಆಗಿನ ವ್ಯವಸ್ಥಾಪಕರಾದ ಸಚಿನ್ ಎಂಬವರನ್ನು ಕರೆಸಿ ಮಾತುಕತೆ ನಡೆಸಿ ಸುಮಾರು ಹತ್ತೊಂಬತ್ತು ಬೇಡಿಕೆಯಲ್ಲಿ ಹದಿನೆಂಟು ಬೇಡಿಕೆಯನ್ನು ಬಗೆಹರಿಸಿ ಕಾರ್ಮಿಕರಿಗೆ ಪ್ರಾಮಾಣಿಕ ನ್ಯಾಯ ದೊರಕಿಸುವಲ್ಲಿ ಯಶಸ್ವಿ ಕಂಡಿದ್ದರು. ಅದೇ ರೀತಿ ಈ ಬಾರಿಯೂ ನಮ್ಮ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ಹದಿಮೂರು ವರುಷಗಳಿಂದ ಸಾಮಾಜಿಕ ಹೋರಾಟಗಳನ್ನ ಮಾಡಿ ಪ್ರಾಮಾಣಿಕವಾಗಿ ನ್ಯಾಯ ದೊರಕಿಸಿ ಕೊಟ್ಟಿರುತ್ತಾರೆ. ಅವರೊಂದಿಗೆ ಚರ್ಚಿಸಿ ತಮ್ಮ ಬೇಡಿಕೆಯನ್ನು ಬಗೆಹರಿಸಿ ಕೊಡುವ ವಿಶ್ವಾಸವನ್ನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ಧೀನ್ ಸುಬ್ರಹ್ಮಣ್ಯನಗರ, ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್, ಜೊತೆ ಕಾರ್ಯದರ್ಶಿ ಡ್ಯಾನಿ, ಗಣೇಶ್ ರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.