ಉಡುಪಿ : ಸ್ವಿಗ್ಗಿ ಸಂಸ್ಥೆಯಲ್ಲಿ ಡೆಲಿವೆರಿ ಬಾಯ್ಸ್ ಗಳಾಗಿ ಕೆಲಸಮಾಡುತ್ತಿರುವ ತುಳುನಾಡ ಕಾರ್ಮಿಕರಿಗೆ ಉಡುಪಿ ಹಾಗೂ ಮಣಿಪಾಲ ಡಿವಿಷನ್‌ನ ಮ್ಯಾನೆಜರ್ ಆದ ಚರಿತ್ ಎಂಬವರು ಬಂದ ನಂತರ ಹಲವು ರೀತಿಯ ಸಮಸ್ಯೆಗಳಾಗಿವೆಯೆಂದು ದಿನಾಂಕ 27/07/2022 ರಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರಿಗೆ ಮನವಿ ನೀಡಿದ್ದರು ಅದರಂತೆ ತುಳುನಾಡ ಸ್ಥಾಪಕಾಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರೊಂದಿಗೆ ಚರ್ಚಿಸಿ ಸ್ವಿಗ್ಗಿ ಸಂಸ್ಥೆಯ ಮ್ಯನೆಜರ್ ಆದ ಚರಿತ್ ಎಂಬವರನ್ನು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾದಾಗ ಅವರಿಂದ ಯಾವುದೇ ರೀತಿಯ ಸ್ಪಂದನೆ ಬರದ ಕಾರಣ ದಿನಾಂಕ 28/07/2022 ರಂದು ಉಡುಪಿ ಜಿಲ್ಲಾಧಿಕಾರಿಯವರಿಗೆ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ರೋಹಿತ್ ಕರಂಬಳ್ಳಿಯವರು ಮನವಿ ನೀಡಿದರು.
ಮನವಿ ಸ್ವೀಕರಿಸಿದ ಮಾನ್ಯ ಜಿಲ್ಲಾಧಿಕಾರಿಯವರು ಉತ್ತಮ ಸ್ಪಂದನೆ ನೀಡಿ ಕಾರ್ಮಿಕ ಇಲಾಖೆ ಅಧಿಕಾರಿಯೊಂದಿಗೆ ಮಾತನಾಡಿ ಸ್ವಿಗ್ಗಿ ಡೆಲಿವೆರಿ ಬಾಯ್ಸ್ ರವರುಗಳ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವ ಬರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೊಹಮ್ಮದ್ ಹಾರಿಸ್, ಜೊತೆ ಕಾರ್ಯದರ್ಶಿ ಡ್ಯಾನಿ, ಮನ್ಸೂರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.