Thursday, March 28, 2024
spot_img
More

    Latest Posts

    ಅಮೆರಿಕಕ್ಕೆ ತೆರಳಲಿರುವ ಭಾರತೀಯ ಐಟಿ ವೃತ್ತಿಪರರಿಗೆ ಸಿಹಿ ಸುದ್ದಿ!!

    ಎಚ್ -1 ಬಿ ವೀಸಾಗಳಿಗೆ ಅರ್ಜಿ ಸಲ್ಲಿಸಿರುವ ಕೆಲವರನ್ನು ಆಯ್ಕೆ ಮಾಡಲು ಯುಎಸ್ ಇನ್ನೊಂದು ಅವಕಾಶ ನೀಡಲು ನಿರ್ಧರಿಸಿದ್ದು,ಇದಕ್ಕಾಗಿ ಅಮೆರಿಕ ಎರಡನೇ ಬಾರಿಗೆ ಲಾಟರಿ ಪ್ರಕ್ರಿಯೆಯನ್ನು ಆಯೋಜಿಸಿದೆ.

    ಮೊದಲ ಲಾಟರಿಯಲ್ಲಿ ಈ ವೀಸಾ ಪಡೆಯಲು ಸಾಧ್ಯವಾಗದ ನೂರಾರು ಭಾರತೀಯ ಐಟಿ ವೃತ್ತಿಪರರಿಗೆ ಇದು ಮತ್ತೊಂದು ಅವಕಾಶ. ಈ ವಲಸೆ ರಹಿತ ವೀಸಾಗೆ ಭಾರತದ ಐಟಿ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆಯಿದೆ. ಯುಎಸ್ ಕಂಪನಿಗಳು ಈ ವೀಸಾ ಮೂಲಕ, ವಿಶೇಷ ತಾಂತ್ರಿಕ ಪರಿಣತಿ ಅಗತ್ಯವಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ.

    2022 ರ ಆರ್ಥಿಕ ವರ್ಷಕ್ಕೆ ಇನ್ನೂ ಕೆಲವರಿಗೆ ಅನುಮತಿ ನೀಡಬಹುದು. ಈ ಮೊದಲೇ ಅರ್ಜಿ ಸಲ್ಲಿಸಿದ್ದ ಕೆಲವರನ್ನು ಜು. 28ರಂದು ಆಯ್ಕೆ ಮಾಡಲಾಗಿದೆ. ಆ. 2 ರಿಂದ ನ. 3 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಕ್ಕಾಗಿ MyUSCIS ಖಾತೆಗಳನ್ನು ನವೀಕರಿಸುತ್ತೇವೆ. ಇತರ ಮಾಹಿತಿಯನ್ನು ಸಹ ಅದರಲ್ಲಿ ಸೇರಿಸಲಾಗುವುದು ಎಂದು ಯುಎಸ್ಸಿಐಎಸ್ ಹೇಳಿದೆ.

    ಎಚ್-1ಬಿ ಕ್ಯಾಪ್-ಸಬ್ಜೆಕ್ಟ್ ಅರ್ಜಿಗಳನ್ನು ಸರಿಯಾದ ಸೇವಾ ಕೇಂದ್ರದಲ್ಲಿ ಸರಿಯಾದ ಸಮಯದೊಳಗೆ ಸಲ್ಲಿಸಬೇಕು. ಎಚ್‌ಸಿ 1 ಅರ್ಜಿಗೆ ಆನ್‌ಲೈನ್ ಫೈಲಿಂಗ್ ಲಭ್ಯವಿಲ್ಲ ಎಂದು ಯುಎಸ್‌ಸಿಐಎಸ್ ತಿಳಿಸಿದ್ದು, ಅರ್ಜಿದಾರರು ಅರ್ಜಿಯೊಂದಿಗೆ ನೋಂದಣಿ ಆಯ್ಕೆ ಸೂಚನೆಯ ಮುದ್ರಿತ ಪ್ರತಿಯನ್ನು ಲಗತ್ತಿಸಬೇಕಾಗುತ್ತದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss