ತಿರುವನಂತಪುರಂ: ಆಟವಾಡುತ್ತಿದ್ದ ಎರಡು ವರ್ಷದ ಪುಟ್ಟ ಮಗುವೊಂದು ಬ್ಯಾಟರಿ ನುಂಗಿದ್ದು ಅದನ್ನು ವೈದ್ಯರು ಕೇವಲ ಇಪ್ಪತ್ತೇ ನಿಮಿಷದಲ್ಲಿ ಹೊರತೆಗೆದು ಮಗುವನ್ನು ಬಚಾವ್ ಮಾಡಿದ ಅಪರೂಪದ ಘಟನೆ ತಿರುವನಂತಪುರದಲ್ಲಿ ನಡೆದಿದೆ.
ಟಿವಿ ರಿಮೋಟ್‌ನಲ್ಲಿ ಹಾಕಲಾಗಿದ್ದ 5 ಸೆಂಟಿಮೀಟರ್ ಉದ್ದ ಮತ್ತು ಒಂದೂವರೆ ಸೆಂಟಿ ಮೀಟರ್ ಅಗಲದ ಬ್ಯಾಟರಿಯನ್ನು ಮಗು ಆಡುತ್ತಿದ್ದಾಗ ನುಂಗಿಬಿಟ್ಟಿದೆ. ವಿಷಯ ತಿಳಿದ ಕೂಡಲೇ ಮಗುವಿನ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಶಸತ್ರಚಿಕಿತ್ಸೆ ಮಾಡಿ ಕೇವಲ 20 ನಿಮಿಷಗಳಲ್ಲಿ ಬ್ಯಾಟರಿಯನ್ನು ಹೊರೆ ತೆಗೆದಿದ್ದಾರೆ. ಈ ಮೂಲಕ ಮಗುವನ್ನು ಸಾವಿನ ದವಡೆಯಿಂದ ರಕ್ಷಿಸಿದ್ದಾರೆ.
©2021 Tulunada Surya | Developed by CuriousLabs