ಸುಳ್ಯ: ಗ್ರಾಹಕರೊಬ್ಬರೊಂದಿಗೆ ದೂರವಾಣಿಯಲ್ಲಿ ಅನುಚಿತವಾಗಿ ಮಾತನಾಡಿದರೆಂಬ ಆಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಸುಳ್ಯದ ಮೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ನನ್ನು ಮೆಸ್ಕಾಂನ ಹಿರಿಯ ಅಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಮೆಸ್ಕಾಂ ಎ.ಇ. ಸುಪ್ರೀತ್ ಕುಮಾರ್ ವಜಾಗೊಂಡವರು. ಅನುಚಿತ ಮಾತುಗಳ ಆಡಿಯೋ ವೈರಲ್ ಆಗಿರುವುದರಿಂದ ಮೆಸ್ಕಾಂನ ಘನತೆಗೆ ಕುಂದುಂಟಾಗಿರುವುದರಿಂದ ಸುಪ್ರೀತ್ ರನ್ನು ಅಮಾನತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ