ಬೆಂಗಳೂರು: ಐಪಿಎಸ್ ಅಧಿಕಾರಿ ಮೇಲಿನ 55 ಲಕ್ಷ ಲಂಚ ಪಡೆದ ಪ್ರಕರಣದಲ್ಲಿ ಸಿಪಿಐ ಮತ್ತು ಎಎಸ್ಐ ತಲೆದಂಡವಾಗಿದೆ.ಅತ್ತಿಬೆಲೆಯ ಕ್ರಷರ್ ಉದ್ಯಮಿ ಮುಖ್ಯ ಕಾರ್ಯದರ್ಶಿಗೆ ನೀಡಿದ್ದ ದೂರಿನನ್ವಯ ತನಿಖೆ ನಡೆಸಿ ಈ ಆದೇಶವನ್ನ ಕೇಂದ್ರ ವಲಯ ಐಜಿ ನೀಡಿದ್ದಾರೆ. 5 ಲಕ್ಷ ರುಪಾಯಿ ಸುಲಿಗೆ ಮಾಡಿದ್ದಾರೆಂದು ಕಂಡು ಬಂದಹಿನ್ನೆಲೆ ಐಪಿಎಸ್ ಅಧಿಕಾರಿ ಬಿಟ್ಟು ಕೆಳಹಂತದ ಸಿಪಿಐ, ಎಎಸ್ಐಗಳಿಬ್ಬರನ್ನು ಅಮಾನತ್ತು ಮಾಡಲಾಗಿದೆ.
ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಬೆಂಗಳೂರು ಕೇಂದ್ರ ವಲಯದ ಐಜಿಪಿ ಹಾಲಿ ವಿಜಿಪುರ ಹಾಗೂ ಈ ಹಿಂದೆ ಡಿಸಿಐಬು ಸಿಪಿಐಯಾಗಿದ್ದ ಟಿ. ಶ್ರೀನಿವಾಸ್ ಹಾಗೂ ಎಎಸ್ಐ ಶುಭ, ಕೆ ಜಿ ಅನಿತಾ ಅವರನ್ನ ಅಮಾನತ್ತು ಗೊಳಿಸಿ ಆದೇಶ ಹೊರಡಿಸಿದೆ.
ವಿಚಾರಣೆಯಲ್ಲಿ ದೂರುದಾರು ನೀಡಿದ್ದ ಹೇಳಿಕೆಗಳು ದಾಖಲಾತಿಗಳ ಆದಾರದ ಮೇಲೆ ಈ ಆದೇಶ ಹೊರಡಿಸಲಾಗಿದೆ. ಟಿ ಶ್ರೀನಿವಾಸ್ ಅವರು ಮತ್ತು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿ ತಿಳಿಸಿರುವ ಅವಧಿಯಲ್ಲಿ ಪರಸ್ಪರ ನಿಕಟ ಸಂಪರ್ಕದಲ್ಲಿದ್ದು ಸಾಬೀತಾಗಿದೆ.
ಅಲ್ಲದೆ ಶ್ರೀನಿವಾಸ್, ಶುಭ, ಅನಿತಾ ಅವರ ಮೂಲಕ 5,00,000 ಲಕ್ಷ ರು.ಹಣವನ್ನು ಪಡೆದು ಅರ್ಜಿ ವಿಚಾರದಲ್ಲಿ ಅರ್ಜಿದಾರರಿಗೆ ಸಹಾಯ ಮಾಡುವುದಾಗಿ ಹೇಳಿ ನಂಬಿಸಿದ್ರು. ಈ ಆರೋಪಕ್ಕೆ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಅಮಾನತ್ತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಆದ್ರೆ ದೂರುದಾರರು ಅಂದಿನ ಬೆಂ ಗ್ರಾ. ಎಸ್ಪಿಯಾಗಿದ್ದ ರವಿ ಡಿ ಚೆನ್ನಣ್ಣನವರ್ ಮೇಲೂ ಲಂಚದ ಆರೋಪಹೊರಿಸಿದ್ರು ಆದ್ರೆ ದೊಡ್ಡ ಅಧಿಕಾರಿಗಳನ್ನು ಬಿಟ್ಟು ಸಣ್ಣ ಅಧಿಕಾರಿಗಳನ್ನು ಅಮಾನತ್ತು ಮಾಡಿರೋದು ಎಷ್ಷರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನೆಮಾಡ್ತಿದ್ದಾರೆ.
©2021 Tulunada Surya | Developed by CuriousLabs