ಮಂಗಳೂರು : ಉದ್ಯಮಿ, ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಕ್ತಾರರಾಗಿದ್ದ ಕುಲಶೇಖರ ನಿವಾಸಿ ಸುಶೀಲ್ ನೊರೊನ್ಹಾ(60) ಅವರು ಇಂದು ಹೃದಯಾಘಾತದಿಂದ ವಿಧಿವಶರಾದರು.
ಸುಶೀಲ್ ನೊರೊನ್ಹಾ ಅವರು ಸ್ಟೆಲ್ಲಾ ಮತ್ತು ದಿವಂಗತ ಜೋಸೆಫ್ ಅವರ ಪುತ್ರರಾಗಿದ್ದು, ಪತ್ನಿ ಎಡ್ನಾ ನೊರೊನ್ನಾ , ಮಗ ಏಂಜೆಲೋ ಮತ್ತು ಸಹೋದರ ವಕೀಲ ಎಂ ಪಿ ನೊರೊನ್ಹಾ ಅವರನ್ನು ಅಗಲಿದ್ದಾರೆ.
ಸುಶೀಲ್ ನೊರೊನ್ನಾ ಅವರು ಹಲವು ಸಮಾಜಿಕ ಸೇವಾ ಸಂಘಟನೆಗಳಲ್ಲಿ ತಮ್ಮ ತೊಡಗಿಸಿಕೊಂಡು ಜನಪ್ರಿಯರಾಗಿದ್ದರು. ಜೆಡಿಎಸ್‌ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದರು. ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಕಾರ್ಯದರ್ಶಿಯಾಗಿ, ಕ್ರಿಸ್ಟೋಫರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
