Tuesday, July 16, 2024
spot_img
More

  Latest Posts

  ಮಾತೃಭೂಮಿ ಯುವಕ ಸಂಘದ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಸುರೇಶ್ ಶೆಟ್ಟಿ ಯೆಯ್ಯಾಡಿ

  ಮುಂಬಯಿ: ಕನ್ನಡ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ, ಕಾಂಗ್ರೆಸ್ ನಾಯಕ ,ಸಮಾಜಸೇವಕ ಸುರೇಶ್ ಶೆಟ್ಟಿ ಯೆಯ್ಯಾಡಿಯವರು ’ಮಾತೃಭೂಮಿ’ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
  ಮಾತೃಭೂಮಿ ಯುವಕರ ಸಂಘ(ರಿ) ಬೆಂಗಳೂರು ಇದರ ಬೆಳ್ಳಿಹಬ್ಬ ಸಂಭ್ರಮ -2023 ರ ಸಮಾರಂಭ ಆ.12 ರಂದು ಬೆಂಗಳೂರಿನ ಯುವನಿಕ ಸಭಾಗೃಹದಲ್ಲಿ ನಡೆಯಿತು.


  ಈ ಸಮಾರಂಭದಲ್ಲಿ ಕನ್ನಡ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ, ಕಾಂಗ್ರೆಸ್ ನಾಯಕ ,ಸಮಾಜಸೇವಕ ಸುರೇಶ್ ಶೆಟ್ಟಿ ಯೆಯ್ಯಾಡಿಯವರಿಗೆ ಹೊರನಾಡು ಕನ್ನಡಪರ ಸೇವೆಗಾಗಿ “ಮಾತೃಭೂಮಿ ರಾಷ್ಟ್ರೀಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.


  2010ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊರನಾಡು ಕನ್ನಡ ಸಂಘಟನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.


  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬ್ಯಾರಿ ತುಳು ಸಂಗಮ ಕಾರ್‍ಯಕ್ರಮದಲ್ಲಿ ಸಮಾಜ ಸೇವೆಗಗಿ ಪ್ರಶಸ್ತಿ, ಕೇರಳ ತುಳು ಅಕಾಡೆಮಿ ತುಳು ಸಾಹಿತ್ಯ ಉತ್ಸವ ಕಾರ್‍ಯಕ್ರಮದಲ್ಲಿ ಪ್ರಶಸ್ತಿ, ಇರ್ಷಾದ್ ಸಂದ್ಯಾ ಅವಾರ್ಡ್ ಕಾರ್ಯಕ್ರಮದಲ್ಲಿ ಮೊಗ್ರಾಲ್ ವಾರ್ಷಿಕ ಪ್ರಶಸ್ತಿ,ಥಾಣೆ ಶ್ರೀ ಶಕ್ತಿ ಮಹಿಳಾ ಮಂಡಳಿ ವಾರ್ಷಿಕೋತ್ಸವದಲ್ಲಿ ವಾರ್ಷಿಕ ಪ್ರಶಸ್ತಿ ಯನ್ನು ತನ್ನ ಮುಡಿಗೇರಿಸಿಕೊಂಡಿದ್ದರು.

  ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಮತ್ತು ಚಲನ ಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಪಾಲ್ಗೊಂಡಿದ್ದರು

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss