Saturday, April 20, 2024
spot_img
More

    Latest Posts

    ಮುಲ್ಕಿ:ನಿಷೇಧಾಜ್ಞೆ ಹಿನ್ನಲೆ ಸುರತ್ಕಲ್ ಟೋಲ್ ಚಲೋ ಪಾದಯಾತ್ರೆ ಮುಂದೂಡಿಕೆ

    ಮುಲ್ಕಿ:ಇಂದು ಹಿಜಾಬ್ ಕುರಿತು ಉಚ್ಚ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಆ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿನ್ನೆ ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜಿಗೆ ರಜೆ ಹಾಗೂ ನಿಷೇಧಾಜ್ಞೆ ಜಾರಿಗೊಂಡಿದೆ. ಅತಿ ಸೂಕ್ಷ್ಮ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಎಲ್ಲಾ ರೀತಿಯ ಸಭೆ ಸಮಾರಂಭ,ಮೆರವಣಿಗೆಗಳ ಮೇಲೆ ನಿಷೇದ ಹೇರಲಾಗಿದೆ.

    ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಸುರತ್ಕಲ್ ಟೋಲ್ ಚಲೋ ಪಾದಯಾತ್ರೆ ನಡೆಸುವುದು ಅಸಾಧ್ಯವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಲಿರುವ ಜನರ ಹಿತ, ಸುರಕ್ಷೆ, ಕಾನೂನಿನ ಅಂಶಗಳನ್ನು ಗಮನದಲ್ಲಿಟ್ಟು ಸುರತ್ಕಲ್ ನಲ್ಲಿ ತುರ್ತಾಗಿ ಸಭೆ ಸೇರಿದ ಲಭ್ಯ ಮುಖಂಡರ ಸಭೆ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದೆ. ಬೆಳಿಗ್ಗೆ ಹೆಜಮಾಡಿಯಲ್ಲಿ ಸಮಾನ ಮನಸ್ಕ ಸಂಘಟನೆಗಳ ಪದಾಧಿಕಾರಿಗಳ ಸಭೆ ಸೇರಿ ಮುಂದಿನ ದಿನಾಂಕ ಪ್ರಕಟಿಸಲಾಗುವುದು.
    ಎಂದು ಆಧ್ಯಕ್ಷರು ಹಾಗೂ ಸದಸ್ಯರು ಮುಲ್ಕಿ ತಾಲೂಕು ಅಭಿವೃದ್ದಿ ಸಮಿತಿ ಪ್ರಕಟಣೆ ತಿಳಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss