ಬೆಂಗಳೂರು: 2021-22 ನೇ ಸಾಲಿನಲ್ಲಿ ಅನುತ್ತೀರ್ಣರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಅರ್ಜಿ ಆಹ್ವಾನಿಸಿದೆ. ಪೂರಕ ಫಲಿತಾಂಶ ವೇಳಾಪಟ್ಟಿಯನ್ನು ಜೂನ್ ಕೊನೆ ವಾರದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಲಿದೆ.
ಜೂ. 24 ರೊಳಗೆ ಅನುತ್ತೀರ್ಣವಾದ ವಿದ್ಯಾರ್ಥಿಗಳು ದಂಡ ರಹಿತವಾಗಿ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಪ್ರಾಂಶುಪಾಲರು ಒಂದೇ ಕಂತಿನಲ್ಲಿ ಪಾವತಿಸಲು ಜೂ. 27 ಕೊನೆ ದಿನ. ಪ್ರಾಂಶುಪಾಲರು ಪರೀಕ್ಷಾ ಅರ್ಜಿಗಳ ಮೂಲ ಚಲನ್ ಸಮೇತ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಲು ಜೂ. 28 ಕೊನೆ ದಿನ ನಿಗದಿ ಪಡಿಸಲಾಗಿದೆ. ದಂಡ ಸಹಿತವಾಗಿ ಜು. 4 ರೊಳಗೆ ಅರ್ಜಿ ಸಲ್ಲಿಸಬೇಕು. ಜು. 5 ರೊಳಗೆ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಖಜಾನೆಗೆ ಸಂದಾಯ ಮಾಡಬೇಕು. ಜು. 6 ರಂದು ಜಿಲ್ಲಾ ಉಪ ನಿರ್ದೇಶಕರಿಗೆ ಅರ್ಜಿಗಳ ಮೂಲ ಚಲನ್ ಸಮೇತ ವಿವರಗಳನ್ನು ಸಲ್ಲಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪ್ರವರ್ಗ 1 ರ ವ್ಯಾಪ್ತಿಗೆ ಬರುವ ವಿದ್ಯಾರ್ಥಿಗಳು ಯಾವುದೇ ಪರೀಕ್ಷಾ ಶುಲ್ಕ ಪಾವತಿಸುವಂತಿಲ್ಲ. ಅಂಕಪಟ್ಟಿ ಶುಲ್ಕ ಕೇವಲ 50 ರೂ. ಪಾವತಿಸಬೇಕು ಅಷ್ಟೇ. ಉಳಿದ ವಿದ್ಯಾರ್ಥಿಗಳು ಈ ಕೆಳಕಂಡಂತೆ ವಿಷಯವಾಗು ಶುಲ್ಕ ಪಾವತಿಸಬೇಕು.
ಒಂದು ವಿಷಯದಲ್ಲಿ ಅನುತ್ತೀರ್ಣ : 140 ರೂ.
ಎರಡು ವಿಷಯ ಅನುತ್ತೀರ್ಣ: 270 ರೂ.
ಮೂರು ಅಥವಾ ಹೆಚ್ಚಿನ ವಿಷಯಕ್ಕೆ 400 ರೂ.
ಮಹತ್ವದ ಸೂಚನೆ:
2022 ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಜೂನ್ ಮಾಹೆಯಲ್ಲಿ ಪ್ರಕಟಿಸಲಾಗುತ್ತದೆ. 2022 ಏಪ್ರಿಲ್ ಮೇ ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಪೂರಕ ಪರೀಕ್ಷೆ ಶುಲ್ಕ ಕಟ್ಟಿಸಿಕೊಳ್ಳಲು ಅನುತ್ತೀರ್ಣ ಓಎಂಆರ್ ಅರ್ಜಿ ಕಾಯಬೇಕಾದ ಅವಶ್ಯಕತೆ ಇಲ್ಲ. ಫಲಿತಾಂಶ ಪಟ್ಟಿ ಆಧಾರದ ಮೇಲೆ ಅನುತ್ತೀರ್ಣ ವಿಷಯಗಳಿಗೆ ಅನುಗುಣವಾಗಿ ಪರೀಕ್ಷಾ ಶುಲ್ಕ ಕಟ್ಟಿಸಿಕೊಂಡು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು. 2022 ರ ಏಪ್ರಿಲ್ ಮತ್ತು ಮೇ ಫಲಿತಾಂಶ ತಿರಸ್ಕಿರಿ ಪರೀಕ್ಷೆ ಬರೆಯಲು ಇಚ್ಛಿಸಿದಲ್ಲಿ ಮೂಲ ಅನುತ್ತೀರ್ಣ ಒಎಂಆರ್ ಗಳನ್ನು ಪಡೆದುಕೊಂಡ ನಂತರವೇ ಕ್ರಮ ವಹಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 080-23083860 ಸಂಪರ್ಕಿಸಲು ಕೋರಿದೆ.
