Friday, April 19, 2024
spot_img
More

    Latest Posts

    ಸುಳ್ಯ : ಅಕ್ರಮ ಗೋ ಸಾಗಾಟ ; ಓರ್ವ ವಶಕ್ಕೆ ಇಬ್ಬರು ಪರಾರಿ!

    ಸುಳ್ಯ : ಸುಳ್ಯ ನಗರದ ಜಟ್ಟಿಪಳ್ಳ ಸಮೀಪ ಅಕ್ರಮವಾಗಿ ಎರಡು ದನಗಳನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಸುಳ್ಯ ಪೊಲೀಸರು ದನಗಳನ್ನು ಸಾಗಿಸುತ್ತಿದ್ದ ಕಾರ್ ನ್ನು ಅಡ್ಡಗಟ್ಟಿ ಓರ್ವನನ್ನು ಬಂಧಿಸಿದ ಪ್ರಕರಣ ರಾತ್ರಿ ಸುಳ್ಯದಲ್ಲಿ ನಡೆದಿದೆ.


    ತಪ್ಪಿಸಿಕೊಳ್ಳುವ ಭರದಲ್ಲಿ ಅಕ್ರಮ ದನ ಸಾಗಾಟಗಾರರ ವಾಹನ ಮನೆಯೊಂದರ ಕಂಪೌಂಡಿಗೆ ಗುದ್ದಿದ್ದು ಈ ಸಂಧರ್ಭದಲ್ಲಿ ಕಾರಿನಲ್ಲಿ ಮೂರು ಮಂದಿ ಇದ್ದರು ಎನ್ನಲಾಗಿದೆ . ಈ ವೇಳೆ ಚಾಲಕ ಕಾರಿನಿಂದಿಳಿದು ಪರಾರಿಯಾದಾಗ ಕಾರು ಹಿಂಬದಿ ಚಲಿಸಿ ಗೋಡೆಗೆ ತಾಗಿ ನಿಂತಿತು. ಅಷ್ಟರಲ್ಲಿ ಅಲ್ಲಿ ಜಮಾಯಿಸಿದವರು ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಮೂವರಲ್ಲಿ ಇಬ್ಬರು ಪರಾರಿಯಾಗಿ ಒಬ್ಬ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಗೊಂಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss