Friday, April 19, 2024
spot_img
More

    Latest Posts

    ಆ. 27 ರಿಂದ 31ರ ವರೆಗೆ ಸುಳ್ಳಮಲೆ ಗುಹಾ ತೀರ್ಥಸ್ನಾನ

    ಸುಳ್ಯ: ಪ್ರತಿ ವರ್ಷ ದಂತೆ ಈ ವರ್ಷ ಐತಿಹಾಸಿಕ ಧಾರ್ಮಿಕ ಹಿನ್ನಲೆಯಿರುವ ಸುಳ್ಳ ಮಲೆ ಗುಹಾ ತೀರ್ಥ ಸ್ನಾನ ಆ. 27 ರಂದು ಶನಿವಾರದಿಂದ ಆ.31ರ ಬುಧವಾರ ಬಾದ್ರಪದ ಶುಕ್ಲ ಚೌತಿ ವರೆಗೆ ಜರುಗಲಿದೆ.

    ಸೋಣ ಅಮವಾಸ್ಯೆಯಂದು ಬಿದಿರಿನ ಕೇರ್ಪು ( ಏಣಿ) ಇಡುವ ಸಂಪ್ರದಾಯದ ಬಳಿಕ ಅರಸು ಶ್ರೀ ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಮೊದಲಾದ ಧಾರ್ಮಿಕ ವಿಧಿ ವಿಧಾನ ಬಳಿಕ ಭಕ್ತಾದಿಗಳಿಗೆ ತೀರ್ಥ ಸ್ನಾನಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ.

    ಭಕ್ತಾದಿಗಳು ತೀರ್ಥ ಸ್ನಾನ ಕ್ಕೆ ಬರುವಾಗ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಬರುವ ಮೂಲಕ ತೀರ್ಥಕ್ಷೇತ್ರದ ಪಾವಿತ್ರ್ಯವನ್ನು ಗೌರವಿಸಬೇಕಾಗಿ ವಿನಂತಿಯನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮುಕ್ತೇಸರ ಮಾಣಿಗುತ್ತು ಸಚಿನ್ ರೈ ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss