Thursday, April 25, 2024
spot_img
More

    Latest Posts

    ಕಾರ್ಕಳ: ದಂಪತಿಗಳ ನಡುವೆ ಜಗಳ – ಮನನೊಂದು ಪತ್ನಿ ಆತ್ಮಹತ್ಯೆ

    ಕಾರ್ಕಳ: ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಮಟನ್ ಸ್ಟಾಲ್ ಬಳಿಯಲ್ಲಿರುವ ಮನೆಯೊಂದರಲ್ಲಿ ದಂಪತಿಗಳ ನಡುವೆ ಜಗಳ ನಡೆದು ಪತ್ನಿ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ಲೋಕೇಶ್ ಎಂಬವರ ಪತ್ನಿ ಶೋಭಾ(28) ಎಂದು ಗುರುತಿಸಲಾಗಿದೆ.ಲೋಕೇಶ್ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿ ಶೋಭಾಳೊಂದಿಗೆ ಜಗಳ ಮಾಡಿದ್ದಾರೆ. ಇದೇ ಸಿಟ್ಟಿನಲ್ಲಿ ಶೋಭಾ ಕೋಣೆ ಓಳಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ನು ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss