ಶಿರ್ವ :ವ್ಯಕ್ತಿಯೊಬ್ಬರು ಮಾನಸಿಕ ಖಿನ್ನತೆಯಿಂದಾಗಿ ಬೆಂಕಿ ಹಚ್ಚಿಕೊಂಡು ಶರಣಾದ ಘಟನೆ ಸಂಭವಿಸಿದೆ. ಕುಂಜಾರು ಗಿರಿನಗರ ಅರಸೀಕಟ್ಟೆಯ ನಟರಾಜ (62) ಎಂಬವರು ಮನೆಯೊಳಗಡೆ ಮೈಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

