Friday, April 19, 2024
spot_img
More

    Latest Posts

    ಇದ್ದಕ್ಕಿದ್ದಂತೆ ಜೇಬಿನಲ್ಲಿಟ್ಟಿದ್ದ ಮೊಬೈಲ್​ ಸ್ಫೋಟ

    ಮಧ್ಯಪ್ರದೇಶ: ವ್ಯಕ್ತಿಯೋರ್ವನ ಜೇಬಿನಲ್ಲಿ ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟಿಸಿರುವ ಘಟನೆ ಮಧ್ಯ ಪ್ರದೇಶದ ಉಜ್ಜಯಿನಿಯ ಫಜಲ್‌ಪುರ ವ್ಯಾಪ್ತಿಯಲ್ಲಿ ನಡೆದಿದೆ. ಪಾದರಕ್ಷೆ ಮಾಡುವ ಅಂಗಡಿಯ ಮಾಲೀಕ ನಿರ್ಮಲ್ ಪಮ್ನಾನಿ ಎಂಬುವರು ತಮ್ಮ ಜೇಬಿನಲ್ಲಿ ಮೊಬೈಲ್​ ಇರಿಸಿಕೊಂಡಿದ್ದರು. ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಘಟನೆ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಸ್ಫೋಟ ಹಿನ್ನೆಲೆ ಉದ್ಯಮಿಯ ಜೀನ್ಸ್ ಮತ್ತು ಕಾಲುಗಳು ಸುಟ್ಟಿವೆ. ಸ್ಪೋಟಗೊಂಡ ಮೊಬೈಲ್ ರೆಡ್ಮಿ ಕಂಪನಿಯದು ಎನ್ನಲಾಗಿದೆ. ಮೊಬೈಲ್​ ಅನ್ನು ಚಾರ್ಜ್​​​ನಿಂದ ತೆಗೆದು ಅವರು ಜೇಬಿನಲ್ಲಿಟ್ಟುಕೊಂಡು ತೆರಳುತ್ತಿದ್ದರು ಎನ್ನಲಾಗಿದೆ. ಹೆಚ್ಚು ಬಿಸಿಲು ಹಾಗೂ ಬಿಸಿಯಾಗಿದ್ದ ಮೊಬೈಲ್​ ಸ್ಫೋಟವಾಗಿದೆ ಎನ್ನಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss