Friday, March 29, 2024
spot_img
More

    Latest Posts

    ಮಂಗಳೂರು-ಸುಬ್ರಹ್ಮಣ್ಯ ರೈಲು ಪುನರಾರಂಭ

    ಮಂಗಳೂರು ಸೆಂಟ್ರಲ್‌- ಸುಬ್ರಹ್ಮಣ್ಯ ರೋಡ್‌ ಹಾಗೂ ಮಂಗಳೂರು ಸೆಂಟ್ರಲ್‌-ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್‌ ರೈಲು ಮರು ಆರಂಭಕ್ಕೆ ರೈಲ್ವೆ ಮಂಡಳಿಯು ಅನುಮತಿ ನೀಡಿದ್ದು ಡಿಸೆಂಬರ್ 9ರಿಂದ ಸಂಚರಿಸುವ ಸಾಧ್ಯತೆಗಳಿವೆ. ಈ ಕುರಿತು ವೇಳಾಪಟ್ಟಿ ಬಿಡುಗಡೆಯಾಗಿದೆ. ಇದರ ಪ್ರಕಾರ ನಂ. 06489 ರೈಲು ಬೆಳಗ್ಗೆ 10ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು, 10. 50ಕ್ಕೆ ಬಂಟ್ವಾಳ, 11. 04ಕ್ಕೆ ನೇರಳಕಟ್ಟೆ, 11. 18ಕ್ಕೆ ಕಬಕ ಪುತ್ತೂರು, 11. 31ಕ್ಕೆ ನರಿಮೊಗರು, 11. 40ಕ್ಕೆ ಕಾಣಿಯೂರು, 11. 50 ಕ್ಕೆ ಎಡಮಂಗಲ, 11. 56ಕ್ಕೆ ಕೋಡಿಂಬಾಳ, 12. 01ಕ್ಕೆ ಬಜಕೆರೆ, ಹಾಗೂ 12. 30ಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಲಿದೆ. ಮತ್ತೆ ನಂ. 06488 ಸುಬ್ರಹ್ಮಣ್ಯ ರೋಡ್‌-ಮಂಗಳೂರು ಸೆಂಟ್ರಲ್‌ ರೈಲು 1. 30ಕ್ಕೆ ಸುಬ್ರಹ್ಮಣ್ಯ ರೋಡ್‌ನಿಂದ ಹೊರಟು, 1. 37ಕ್ಕೆ ಬಜಕೆರೆ, 1. 41ಕ್ಕೆ ಕೋಡಿಂಬಾಳ, 1. 49ಕ್ಕೆ ಎಡಮಂಗಲ, 1. 57ಕ್ಕೆ ಕಾಣಿಯೂರು, 2. 06ಕ್ಕೆ ನರಿಮೊಗರು, 2. 19ಕ್ಕೆ ಕಬಕ ಪುತ್ತೂರು, 2. 32ಕ್ಕೆ ನೇರಳಕಟ್ಟೆ, 2. 49ಕ್ಕೆ ಬಂಟ್ವಾಳ, 3. 35ಕ್ಕೆ ಪಡೀಲ್‌ ಹಾಗೂ 4. 10ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss