ಸುಬ್ರಹ್ಮಣ್ಯ: ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ವ್ಯಕ್ತಿಗಳಿಬ್ಬರ ಮೃತದೇಹ ಸುಬ್ರಹ್ಮಣ್ಯ ಸಮೀಪದ ಏನೆಕಲ್ಲು ನದಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಧರ್ಮಪಾಲ ಪರಮಲೆ (46) ಹಾಗೂ ಬೆಳ್ಯಪ್ಪ ಚಳ್ಳಂಗಾರು ಚೊಕ್ಕಾಡಿ (49) ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಕಸ ವಿಲೇವಾರಿ ಘಟಕದಲ್ಲಿ ಧರ್ಮಪಾಲ ಅವರು ದಿನಗೂಲಿ ನೌಕರರಾಗಿದ್ದರು. ನಿನ್ನೆ ರಾತ್ರಿ ಹೊಳೆಯಲ್ಲಿದ್ದ ಪಂಪ್‌ನ ಫೂಟ್ ವಾಲ್ ಹೊರ ತೆಗೆಯಲೆಂದು ಇಬ್ಬರು ನೀರಿಗಿಳಿದಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿದ್ದು ನೀರಿನಲ್ಲಿ ಮುಳುಗಿರಬಹುದೆಂದು ಶಂಕಿಸಲಾಗಿದೆ.ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ನೀರಿನಿಂದ ಹೊರ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಇನ್ನಷ್ಟೆ ನಡೆಯಬೇಕಿದೆ.
