Tuesday, July 16, 2024
spot_img
More

  Latest Posts

  ಉಳ್ಳಾಲ: ಶಾಲೆಯ ಪಕ್ಕದಲ್ಲೆ ತಲೆ ಎತ್ತಿದ ಬಾರ್‌|ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ ವಿಧ್ಯಾರ್ಥಿಗಳು

  ಉಳ್ಳಾಲ: ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯ ಆವರಣದ ಪಕ್ಕದಲ್ಲೇ ಬಾರ್ & ರೆಸ್ಟೋರೆಂಟ್ ಪ್ರಾರಂಭವಾದ ಬೆನ್ನಲ್ಲೇ ವಿಧ್ಯಾರ್ಥಿಗಳು ಪ್ರತಿಭಟನೆಗಿಳಿದ ಘಟನೆ ಬಾಳೆಪುಣಿ ಗ್ರಾಮದ ಪುಣ್ಯಕೋಟಿ ನಗರದಲ್ಲಿ ನಡೆದಿದೆ.

  ನಗರದ ಶಾರದಾ ಗಣಪತಿ ವಿದ್ಯಾಕೇಂದ್ರದ ಆವರಣದ‌ ಬಳಿಯಲ್ಲೇ ಬಾರ್& ರೆಸ್ಟೋರೆಂಟ್ ನಿರ್ಮಾಣಗೊಂಡಿದ್ದು, ಇದೀಗ ಮದ್ಯ ಕೇಂದ್ರವನ್ನು ಸ್ಥಳಾಂತರಿಸುವಂತೆ ವಿದ್ಯಾರ್ಥಿಗಳು ಜಿಟಿ, ಜಿಟಿ ಮಳೆಯ ನಡುವಲ್ಲೂ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಈ ಬಾರ್ ಗೆ ಸ್ಥಳೀಯ ಪಂಚಾಯತ್ ಆಡಳಿತವು ನಿರಾಕ್ಷೇಪಣಾ ಪತ್ರ ನೀಡಿರುವುದಾಗಿ ಆರೋಪಗಳು ಕೇಳಿಬಂದಿವೆ. ಬಾರ್ ಅನ್ನು ಕೂಡಲೇ ಸ್ಥಳಾಂತರಿಸುವಂತೆ ಆಗ್ರಹಿಸಿ ಶಾರದಾ ವಿದ್ಯಾಗಣಪತಿ ಶಾಲೆಯ ನೂರಾರು ವಿದ್ಯಾರ್ಥಿಗಳು ಬಾಳೆಪುಣಿ ಪಂಚಾಯತ್ ಗೆ ಮುತ್ತಿಗೆ ಹಾಕಿ ಪಂಚಾಯತ್ ಅಧ್ಯಕ್ಷೆ ರಝಿಯಾ ಅವರಿಗೆ ಮನವಿ ಸಲ್ಲಿಸಿದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss