ವಿಶಾಖಪಟ್ಟಣ: ರೈಲಿನಿಂದ ಇಳಿಯುವ ವೇಳೆ ಆಯತಪ್ಪಿ ವಿಧ್ಯಾರ್ಥಿನಿಯೊಬ್ಬಳು ರೈಲು ಮತ್ತು ಪ್ಲಾಟ್ ಫಾಂರ ನಡುವೆ ಸಿಲುಕಿ ಹಾಕಿಕೊಂಡ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದ ದುವ್ವಡ ರೈಲು ನಿಲ್ದಾಣದಲ್ಲಿ ನಡೆದಿದೆ.
ಮಾಹಿತಿ ತಿಳಿದು ಕೂಡಲೇ ಆಗಮಿಸಿದ ರೈಲ್ವೆ ಅಧಿಕಾರಿಗಳು ವಿಧ್ಯಾರ್ಥಿನಿಯನ್ನು ಸುರಕ್ಷಿತವಾಗಿ ಹೊರ ತೆಗೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿಲ್ದಾಣದಲ್ಲಿ ರೈಲಿನಿಂದ ಇಳಿಯುತ್ತಿದ್ದ ವೇಳೆ ಆಕೆ ಕೆಳಗೆ ಬಿದ್ದಳು. ಹೀಗಾಗಿ, ಆಕೆ, ರೈಲು ಮತ್ತು ಪ್ಲಾಟ್‌ಫಾರಂ ನಡುವೆ ಸಿಕ್ಕಿ ಹಾಕಿಕೊಂಡಳು. ಕೂಡಲೇ ರೈಲನ್ನು ನಿಲ್ಲಿಸಿದ ಹಿನ್ನಲೆ ಹೆಚ್ಚಿನ ಪ್ರಾಣಾಪಾಯವಾಗಿಲ್ಲ.