ಉಡುಪಿಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾರ್ಥಿನಿ ನಾಪತ್ತೆ ಯಾದ ಘಟನೆ ಸೆ.16 ರಂದು ನಡೆದಿದೆ. ಕಟಪಾಡಿ ಮಟ್ಟು ಅಳಿಂಜೆ ನಿವಾಸಿ ನವ್ಯಾ (20) ಗುರುವಾರ ಕಾಲೇಜಿಗೆ ತೆರಳಿದವಳು ನಾಪತ್ತೆಯಾಗಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..ಈ ಬಗ್ಗೆ ಮಾಹಿತಿ ಮೇರೆಗೆ ದೀಕ್ಷಿತ್ ಎಂಬಾತ ಪೋಲಿಸರಿಗೊಂದು ಮನವಿ ಪತ್ರ ಸಲ್ಲಿಸಿದ್ದು ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ..ಪಣಿಯೂರು ನಿವಾಸಿ ದೀಕ್ಷಿತ್ ಎಂಬಾತ ತಾನು ಕಟಪಾಡಿ ಮಟ್ಟು ಗ್ರಾಮದ ನವ್ಯಾ ವಿ. ಎಂಬಾಕೆಯು ಜೊತೆ ಸೆ. 7ರಂದು ವಿವಾಹ ವಾಗಿದ್ದು, ಸೆ. 15ರಂದು ಉಡುಪಿ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದೇವೆ ಎಂದು ಕಾಪು ಠಾಣೆಯಲ್ಲಿ ಮನವಿ ಸಲ್ಲಿಸಿದ್ದಾರೆ.
©2021 Tulunada Surya | Developed by CuriousLabs