ಕೇರಳ : ಕಣ್ಣೂರು ಮುಜಪ್ಪಿಲಂಗಾಡ್ ನಲ್ಲಿ ಮತ್ತೊಂದು ಬೀದಿ ನಾಯಿ ದಾಳಿ ನಡೆದಿದ್ದು, ಒಂಬತ್ತು ವರ್ಷದ ಬಾಲಕಿಯ ಮೇಲೆ ಮೂರು ಬೀದಿ ನಾಯಿಗಳು ದಾಳಿ ನಡೆಸಿ ಬಾಲಕಿಗೆ ಗಾಯಗೊಳಿಸಿವೆ.
ಎಡಕ್ಕಾಡ್ ರೈಲು ನಿಲ್ದಾಣದ ಹಿಂಭಾಗದಲ್ಲಿ ಮನೆಯೊಂದರ ಆವರಣದಲ್ಲಿ ಮೂರು ಬೀದಿ ನಾಯಿಗಳು ದಾಳಿ ನಡೆಸಿವೆ. ನಾಯಿಗಳ ದಾಳಿಯಲ್ಲಿ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಬಾಲಕಿಯ ಕೂಗು ಕೇಳಿ ಮಹಿಳೆಯೊಬ್ಬರ ಆಗಮಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಸದ್ಯ ಮಗುವನ್ನು ಕಣ್ಣೂರು ಚಾಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಕೈ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.