Monday, May 23, 2022

ಮಂಗಳೂರು:ಕಬಡ್ಡಿಯಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ಉದಯ ಚೌಟ ಇನ್ನಿಲ್ಲ

ಬಂಟ್ವಾಳ: ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ, ಬ್ಯಾಂಕ್ ಉದ್ಯೋಗಿ ಮಾಣಿ ಬದಿಗುಡ್ಡೆ ನಿವಾಸಿ ಉದಯ ಚೌಟ ಅವರು ಮೇ 21ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ...
More

  Latest Posts

  ಭಾರಿ ವೈರಲ್‌ ಆಗುತ್ತಿದೆ ಈ ಬಾಳೆಹಣ್ಣಿನ ಮೇಲಿರುವ ಬರಹ ; ಏನೆಂದು ಬರೆಯಲಾಗಿದೆ ಗೊತ್ತಾ?

  ತುಮಕೂರು: ಈ ಹಿಂದೆ ಹಲವು ಬಾರಿ ರಥೋತ್ಸವದ ಸಂದರ್ಭದಲ್ಲಿ, ಕೊರೋನಾ ರೋಗ ಓಡಿಸಪ್ಪ.. ಪೊಲೀಸರಿಗೆ ಔರಾದ್ಕಾರ್ ವರದಿ ಜಾರಿಗೊಳಿಸಿ, ಸಂಬಳ ಜಾಸ್ತಿ ಮಾಡಪ್ಪ ಸೇರಿದಂತೆ ವಿವಿಧ ಬಾಳೆಹಣ್ಣಿನ ಹರಕೆಯ ಪೋಟೋಗಳು...

  ಉಡುಪಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಅಧಿಕಾರ ಸ್ವೀಕಾರ

  ಉಡುಪಿ : ಜಿಲ್ಲೆಯ ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಇಂದು ಅಧಿಕಾರ ಸ್ವೀಕರಿಸಿದರು. ಅವರು ತುಮಕೂರು ಜಿಲ್ಲೆಯ ಕುಟುಂಬ ನ್ಯಾಯಾಲಯದ ಪ್ರಧಾನ...

  ಭಾರತೀಯ ಆಶಾ ಕಾರ್ಯಕರ್ತೆಯರಿಗೆ ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ

  ವಿಶ್ವಸಂಸ್ಥೆ- ಮಹಾಮಾರಿ ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಅವಿರತ ಶ್ರಮಿಸಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ ತಲುಪುವಂತೆ ಮಾಡಿದ ಭಾರತದ ಒಂದು ಮಿಲಿಯನ್ (10 ಲಕ್ಷ) ಆಶಾ ಕಾರ್ಯಕರ್ತೆಯರನ್ನು ವಿಶ್ವ...

  ಉಡುಪಿ: ಆಸ್ತಿಗಾಗಿ ಗಂಡನ ಕೊಲೆಗೆ ಯತ್ನಿಸಿದ ಹೆಂಡತಿ : ಕುಕೃತ್ಯಕ್ಕೆ ಮಗ, ಗೆಳೆಯನ ಸಾಥ್!

  ಉಡುಪಿ: ಆಸ್ತಿಗಾಗಿ ಮಹಿಳೆಯೊಬ್ಬಳು ಮಗ ಹಾಗೂ ಗೆಳೆಯನೊಂದಿಗೆ ಸೇರಿಕೊಂಡು ಪತಿಯ ಹತ್ಯೆ ನಡೆಸಲು ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆ ಹೆಬ್ರಿಯ ಮುದ್ರಾಡಿ ಗ್ರಾಮದ ಸುಬ್ಬಣ್ಣ ಕಟ್ಟೆ ಎಂಬಲ್ಲಿ ನಡೆದಿದೆ. ಜಯಾನಂದ...

  ಹೊಟ್ಟೆನೋವಿಗೆ ಉತ್ತಮವಾದ ಮನೆಮದ್ದು

  ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಶುಂಠಿ ಇಲ್ಲದ ಅಡುಗೆ ಮನೆ ಇಲ್ಲ. ಶುಂಠಿ ಬ್ಯಾಕ್ಟೀರಿಯಾ, ವೈರಸ್‌ಗಳ ವಿರುದ್ಧ ಹೋರಾಡುವ ಅತ್ಯಂತ ಪರಿಣಾಮಕಾರಿಯಾದ ಮನೆಮದ್ದಾಗಿದೆ. ಶುಂಠಿಗೆ ಆರ್ಯುವೇದಲ್ಲಿ ಅಗ್ರಸ್ಥಾನದಲ್ಲಿದೆ. ಇದನ್ನು ಮಹೌಷಧಿ ಅಥವಾ ವಿಶ್ವಬೇಷಜ ಎಂತಲೂ ಕರೆಯುತ್ತಾರೆ.

  ಇದರ ಸೇವನೆಯಿಂದಾಗಿ ಶೀತಕೆಮ್ಮಿನಿಂದ ಹಿಡಿದು ಕೆಲ ಅಪಯಾಕಾರಿ ಖಾಯಿಲೆಗಳನ್ನು ವಾಸಿಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಇದು ಆರೋಗ್ಯಕ್ಕೂ ಹಾಗು ಸೌಂದರ್ಯ ಹೆಚ್ಚಿಸಿಕೊಳ್ಳಲೂ ತುಂಬಾ ಉಪಕಾರಿಯಾಗಿದೆ.

  ಹೊಟ್ಟೆ ನೋವಿಗೆ ಶುಂಠಿಗಿಂತ ಉತ್ತಮವಾದ ಮನೆಮದ್ದಿಲ್ಲ ಅಂತಾರೆ. ಹೊಟ್ಟೆಗೆ ಸಂಬಂಧಿದ ಎಲ್ಲಾ ಬಗೆಯ ಕಾಯಿಲೆಗಳಿಗೆ ಶುಂಠಿ ಸೇವನೆ ಅತ್ಯುತ್ತಮ. ಎಲ್ಲ ವಯಸ್ಕರೂ ಹೊಟ್ಟೆ ನೋವಿದ್ದರೆ ಶುಂಠಿ ಸೇವಿಸಬಹುದು. ಹೊಟ್ಟೆ ನೋವಿದ್ದಾಗ ಕಲ್ಲುಪ್ಪಿನೊಂದಿಗೆ ಚೂರು ಹಸಿ ಶುಂಠಿಯನ್ನು ಚೆನ್ನಾಗಿ ಅಗೆದು ನುಂಗಿದರೆ ಹೊಟ್ಟೆ ನೋವು ವಾಸಿಯಾಗುತ್ತದೆ.

  ನಿತ್ಯವೂ ಸ್ವಲ್ಪ ಹಸಿ ಶುಂಠಿ ಸೇವಿಸಿದರೆ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ. ಹಾಗು ಹಲ್ಲು ಹುಳುಕಾಗುವುದು, ಒಸಡಿನಿಂದ ರಕ್ತಸ್ರಾವವಾಗುವುದು, ಹಲ್ಲು ನೋವು ಇಂತಹ ಹಲ್ಲಿನ ಸಮಸ್ಯೆಗಳಿಗೆ ಶುಂಠಿ ಸೇವನೆ ಶಾಶ್ವತ ಪರಿಹಾರ ನೀಡುತ್ತದೆ. ಶುಂಠಿ ಚಹಾ ಸೇವಿಸಿದರೆ ಗಂಟಲು ಕೆರೆತ, ನೋವು ವಾಸಿಯಾಗುತ್ತದೆ ಹಾಗು ಗಂಟಲಿನಲ್ಲಿ ಕಫ ಕಟ್ಟಿಕೊಂಡಿದ್ದರೆ ಇದರ ಸೇವನೆಯಿಂದ ಕಫ ಕರಗಿ ಆಚೆ ಬರುತ್ತದೆ.

  ಬೊಜ್ಜು ಇದ್ದವರು ದೇಹದ ತೂಕ ಇಳಿಸಿಕೊಳ್ಳಬೇಕೆಂದರೆ ನಿತ್ಯವೂ ಮದ್ಯಾಹ್ನ ಊಟದ ನಂತರ ಒಂದು ಲೋಟ ಮಜ್ಜಿಗೆಗೆ ತಾಜಾ ಶುಂಠಿ ಪೇಸ್ಟ್‌ ಕಲಿಸಿಕೊಂಡು ಕುಡಿಯಿರಿ. ಇದರಿಂದ ಪಚನಕ್ರಿಯೆಗೆ ತುಂಬಾ ಸಹಕಾರಿಯಾಗುತ್ತದೆ ಹಾಗು ನಿಧಾನವಾಗಿ ದೇಹದ ಬೊಜ್ಜು ಕರಗುತ್ತದೆ. ಹಲಸಿನ ಹಣ್ಣು ತಿಂದು ಹೊಟ್ಟೆ ಕೆಟ್ಟರೆ ಹಸಿ ಶುಂಠಿಯನ್ನು ಚೆನ್ನಾಗಿ ಅಗೆದು ಅದರ ರಸವನ್ನು ಸೇವಿಸಿ. ಒಂದೇ ದಿನದಲ್ಲಿ ಹೊಟ್ಟೆ ಸರಿಹೋಗುತ್ತದೆ.

  ಕೆಲವೊಮ್ಮೆ ವಾಕರಿಕೆ, ಹೊಟ್ಟೆ ಉಬ್ಬರ, ವಾಂತಿಯಂತಹ ಸಮಸ್ಯೆ ಉಂಟಾದಾಗ ಅದಕ್ಕೆ ಸಮಪ್ರಮಾಣದಲ್ಲಿ ಜೇನುತುಪ್ಪಕ್ಕೆ ಶುಂಠಿ ರಸ ಸೇರಿಸಿ ಎರಡು ಹೊತ್ತು ಊಟಕ್ಕೂ ಮುಂಚೆ ಸೇವಿಸಿದರೆ ವಾಸಿಯಾಗುತ್ತದೆ. ಶುಂಠಿಯ ನಿಯಮಿತವಾದ ಸೇವನೆ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು. ಗರ್ಭಿಣಿಯರಿಗೆ ಉಂಟಾಗುವ ಸುಸ್ತು ಆಯಾಸವನ್ನು ಇದು ನಿಯಂತ್ರಿಸುತ್ತದೆ. ಇಷ್ಟೆಲ್ಲಾ ಆರೋಗ್ಯಕರವಾದ ಹಾಗು ಲಾಭದಾಯಕವಾದ ಶುಂಠಿಯನ್ನು ನಿತ್ಯವೂ ನಿಮ್ಮ ಅಡುಗೆಯಲ್ಲಿ ಬಳಸಿ ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಆರ್ಯುವೇದ ವೈದ್ಯರು ಸಲಹೆ ನೀಡುತ್ತಾರೆ.

  Latest Posts

  ಭಾರಿ ವೈರಲ್‌ ಆಗುತ್ತಿದೆ ಈ ಬಾಳೆಹಣ್ಣಿನ ಮೇಲಿರುವ ಬರಹ ; ಏನೆಂದು ಬರೆಯಲಾಗಿದೆ ಗೊತ್ತಾ?

  ತುಮಕೂರು: ಈ ಹಿಂದೆ ಹಲವು ಬಾರಿ ರಥೋತ್ಸವದ ಸಂದರ್ಭದಲ್ಲಿ, ಕೊರೋನಾ ರೋಗ ಓಡಿಸಪ್ಪ.. ಪೊಲೀಸರಿಗೆ ಔರಾದ್ಕಾರ್ ವರದಿ ಜಾರಿಗೊಳಿಸಿ, ಸಂಬಳ ಜಾಸ್ತಿ ಮಾಡಪ್ಪ ಸೇರಿದಂತೆ ವಿವಿಧ ಬಾಳೆಹಣ್ಣಿನ ಹರಕೆಯ ಪೋಟೋಗಳು...

  ಉಡುಪಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಅಧಿಕಾರ ಸ್ವೀಕಾರ

  ಉಡುಪಿ : ಜಿಲ್ಲೆಯ ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಇಂದು ಅಧಿಕಾರ ಸ್ವೀಕರಿಸಿದರು. ಅವರು ತುಮಕೂರು ಜಿಲ್ಲೆಯ ಕುಟುಂಬ ನ್ಯಾಯಾಲಯದ ಪ್ರಧಾನ...

  ಭಾರತೀಯ ಆಶಾ ಕಾರ್ಯಕರ್ತೆಯರಿಗೆ ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ

  ವಿಶ್ವಸಂಸ್ಥೆ- ಮಹಾಮಾರಿ ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಅವಿರತ ಶ್ರಮಿಸಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ ತಲುಪುವಂತೆ ಮಾಡಿದ ಭಾರತದ ಒಂದು ಮಿಲಿಯನ್ (10 ಲಕ್ಷ) ಆಶಾ ಕಾರ್ಯಕರ್ತೆಯರನ್ನು ವಿಶ್ವ...

  ಉಡುಪಿ: ಆಸ್ತಿಗಾಗಿ ಗಂಡನ ಕೊಲೆಗೆ ಯತ್ನಿಸಿದ ಹೆಂಡತಿ : ಕುಕೃತ್ಯಕ್ಕೆ ಮಗ, ಗೆಳೆಯನ ಸಾಥ್!

  ಉಡುಪಿ: ಆಸ್ತಿಗಾಗಿ ಮಹಿಳೆಯೊಬ್ಬಳು ಮಗ ಹಾಗೂ ಗೆಳೆಯನೊಂದಿಗೆ ಸೇರಿಕೊಂಡು ಪತಿಯ ಹತ್ಯೆ ನಡೆಸಲು ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆ ಹೆಬ್ರಿಯ ಮುದ್ರಾಡಿ ಗ್ರಾಮದ ಸುಬ್ಬಣ್ಣ ಕಟ್ಟೆ ಎಂಬಲ್ಲಿ ನಡೆದಿದೆ. ಜಯಾನಂದ...

  Don't Miss

  ಮಂಗಳೂರು: ಬಿ. ಕೆ. ಹರಿಪ್ರಸಾದ್ ಮತ್ತು ಯು. ಟಿ. ಖಾದರ್‌ರಿಗೆ ಅಭಿನಂದನಾ ಸಮಾರಂಭ

  ಮಂಗಳೂರು: ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಿ. ಕೆ. ಹರಿಪ್ರಸಾದ್ ಮತ್ತು ಕರ್ನಾಟಕ ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕರಾಗಿ ಆಯ್ಕೆಯಾಗಿರುವ ಮಾಜೀ ಮಂತ್ರಿ...

  ಮಲ್ಪೆ: ಚಲಿಸುತ್ತಿದ್ದ ಸ್ಕೂಟರ್ ನಲ್ಲೇ ಹೃದಯಾಘಾತ – ಸಾವು

  ಮಲ್ಪೆ: ಮೀನುಗಾರಿಕೆ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ತೆರಳುತ್ತಿದ್ದ ಸಂದರ್ಭ ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಲ್ಪೆ ಕಂಬಳತೋಟ ಎಂಬಲ್ಲಿ ಮೇ.18ರಂದು ನಡೆದಿದೆ.

  ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಳ – ಜಡ್ಕಲ್, ಮುದೂರಲ್ಲಿ ಶಾಲೆಗೆ 10 ದಿನ ರಜೆ

  ಉಡುಪಿ: 136 ಡೆಂಗ್ಯೂ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, ಬೈಂದೂರು ತಾಲೂಕು ವ್ಯಾಪ್ತಿಯ ಜಡ್ಕಲ್ ಮುದೂರು ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ 10 ದಿನ ರಜೆ ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ. ಜಡ್ಕಲ್...

  ಪೋಷಕರಿಂದ ಪ್ರತ್ಯೇಕವಾಗಿ ವಾಸಿಸಲು ಪತಿಗೆ ಒತ್ತಾಯಿಸುವುದು ಕ್ರೌರ್ಯ: ಛತ್ತೀಸ್‌ಗಢ ಹೈಕೋರ್ಟ್

  ಪೋಷಕರಿಂದ ಪ್ರತ್ಯೇಕವಾಗಿ ವಾಸಿಸಲು ಪತಿಗೆ ಒತ್ತಾಯಿಸಿದರೆ ಸುಳ್ಳು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಮಹತ್ವದ ತೀರ್ಪೊಂದರಲ್ಲಿ ಛತ್ತೀಸ್‌ಗಢ ಹೈಕೋರ್ಟ್ ತಿಳಿಸಿದೆ 

  11 ಕೋಟಿ ರೂ. ಸಂಪತ್ತು ದಾನ: 11 ವರ್ಷದ ಪುತ್ರ, ಪತ್ನಿ ಜೊತೆ ಸನ್ಯಾಸತ್ವ ಸ್ವೀಕರಿಸಿದ ‘ಕುಬೇರ’!

  ಜೈಪುರ: ಬಾಲಾಘಾಟ್‌ನ ಬುಲಿಯನ್ ವ್ಯಾಪಾರಿ ರಾಕೇಶ್ ಸುರಾನಾ, ಸುಮಾರು 11 ಕೋಟಿ ಮೌಲ್ಯದ ಆಸ್ತಿಯನ್ನು ಬಿಟ್ಟು, ಅವರ ಪತ್ನಿ ಮತ್ತು ಮಗನೊಂದಿಗೆ ಮೇ 22 ರಂದು ಜೈಪುರದಲ್ಲಿ ವಿಧಿವತ್ತಾಗಿ ದೀಕ್ಷೆ ಪಡೆಯಲಿದ್ದಾರೆ....