ಸುಳ್ಯ: ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಅರೋಪಿಗಳ ಬಂಧನವಾಗಿದೆ.

ಹತ್ಯೆಯ ಪ್ರಮುಖ ಆರೋಪಿಗಳಾದ ಶಿಯಾಬ್, ರಿಯಾಜ್ ಬಶೀರ್‌ರನ್ನು ಪೊಲೀಸರು ಕೊಲೆಯಾದ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ಮಾಡಿದರು. ಪ್ರವೀಣ್ ನಡೆಸುತ್ತಿದ್ದ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಚಿಕನ್ ಸೆಂಟರ್ ಮುಂದೆಯೇ ಕೊಲೆ ನಡೆದಿತ್ತು . ಇದೀಗ ಕೊಲೆ ನಡೆಸಿದ ಕುರಿತು ಆರೋಪಿಗಳ ಸ್ಥಳ ಮಹಜರು ಡಿವೈಎಸ್‌ಪಿ ಗಾನಾ ಪಿ ಕುಮಾರ್ ನೇತೃತ್ವದಲ್ಲಿ ನಡೆದಿದೆ.
