ಇತ್ತೀಚಿನ ದಿನಗಳಲ್ಲಿ ಸೌಂದರ್ಯಕ್ಕಾಗಿ ಬಹಳಷ್ಟು ವಿಧಾನಗಳನ್ನು ಅನುಸರಿಸುತ್ತೇವೆ. ಫೇಶಿಯಲ್, ಸ್ಕ್ರಬ್, ಸ್ಟೀಮಿಂಗ್, ಫೇಸ್ ಮಾಸ್ಕ್ ಹೀಗೆ ಹತ್ತು ಹಲವು ವಿಧಾನಗಳು. ಇದರಿಂದ ಸೌಂದರ್ಯದ ಜೊತೆಗೆ ತ್ವಚೆ ಆರೈಕೆಯೂ ಚೆನ್ನಾಗಿಯೇ ಆಗುತ್ತದೆ.
ಫೇಶಿಯಲ್ ಮಾಡುವಾಗ ಸ್ಟೀಮಿಂಗ್ ಮಾಡುತ್ತಾರಲ್ಲ, ಹಾಗೆ ಮನೆಯಲ್ಲೆ ಸ್ಟೀಮಿಂಗ್ ಮಾಡಿಕೊಳ್ಳವುದು ಈಗೀಗ ಬಹಳ ಜನಪ್ರಿಯ ಟ್ರೆಂಡ್ ಆಗುತ್ತಿದೆ. ಮುಖದ ಸೌಂದರ್ಯಕ್ಕಾಗಿ ಬಹುತೇಕ ಎಲ್ಲರೂ ಈ ವಿಧಾನವನ್ನು ಸೂಚಿಸುತ್ತಾರೆ. ಆದರೆ ಸ್ಟಿಮಿಂಗ್ ಏಕೆ ಜನಪ್ರಿಯವಾಗುತ್ತಿದೆ ಮತ್ತು ಇದರ ಪ್ರಯೋಜನಗಳೇನು? ತ್ವಚೆಯ ಆರೈಕ ಸ್ವಲ್ಪ ಕಠಿಣ ಕೆಲಸ. ಕೆಲವೊಮ್ಮೆ ಅತಿ ಕೆಲಸದ ಒತ್ತಡದಿಂದಲೋ ಅಥವಾ ಇನ್ಯಾವುದೋ ಕಾರಣದಿಂದ ನಾವು ಚರ್ಮದ ಕಾಳಜಿ ಮಾಡುವುದೇ ಇಲ್ಲ. ಒಂದು ವೇಳೆ ನೀವು ತ್ವಚೆಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕು ಅಂದುಕೊಂಡಿದ್ದರೆ, ಅದಕ್ಕೆ ಉತ್ತಮ ಆಯ್ಕೆ ಫೇಶಿಯಲ್ ಸ್ಟೀಮಿಂಗ್ ಅಥವಾ ಫೇಶಿಯಲ್ ಸ್ಟೀಮರ್. ಎಲೆಕ್ಟ್ರಿಕಲ್ ಸ್ಟೀಮರ್ ಅಥವಾ ಬಿಸಿ ನೀರು ತುಂಬಿರುವ ಪಾತ್ರೆಯಿಂದ ಸ್ಟೀಮ್ ತೆಗೆದುಕೊಳ್ಳುವುದರ ಪ್ರಯೋಜನಗಳ ಬಗ್ಗೆ ಇಲ್ಲಿದೆ.
ಮನೆಯಲ್ಲಿಯೇ ಫೇಶಿಯಲ್ ಸ್ಟೀಮಿಂಗ್ ಮಾಡಿಕೊಳ್ಳುವುದರ ಪ್ರಯೋಜನಗಳು :
ಬ್ಲ್ಯಾಕ್ಹೆಡ್ಸ್ ಮತ್ತು ವೈಟ್ಹೆಡ್ಸ್ಗಳನ್ನು ತೊಡೆದು ಹಾಕುತ್ತದೆ:
ಬ್ಲ್ಯಾಕ್ಹೆಡ್ಸ್ ಮತ್ತು ವೈಟ್ಹೆಡ್ಸ್ಗಳು ದೊಡ್ಡ ತೊಂದರೆ. ಅವುಗಳು ಮೊಡವೆಗಳಂತೆ ಸುಲಭವಾಗಿ ಮಾಯವಾಗುವುದಿಲ್ಲ. ಮುಖದ ಮೇಲೆ ಬಿಸಿ ಹಬೆಯನ್ನು ಹಾಯಿಸಿದಾಗ ಬ್ಲ್ಯಾಕ್ಹೆಡ್ಸ್ಗೆ ಕಾರಣವಾಗುವ ಕೋಶಗಳು ತೆರೆದುಕೊಳ್ಳುತ್ತದೆ. ಈಗಾಗಲೆ ಇರುವ ಬ್ಲ್ಯಾಕ್ಹೆಡ್ಸ್ಗಳು ಮೃದುವಾಗುತ್ತದೆ. ಸ್ಟೀಮಿಂಗ್ ಮಾಡಿಕೊಳ್ಳುವುದರಿಂದ ಬ್ಲ್ಯಾಕ್ಹೆಡ್ಸ್ ಮತ್ತು ವೈಟ್ಹೆಡ್ಸ್ಗಳು ದೂರವಾಗಿ, ತ್ವಚೆಯು ನಯವಾಗುತ್ತದೆ.
ಮೊಡವೆಗಳನ್ನು ತಡೆಯುತ್ತದೆ :
ಫೇಶಿಯಲ್ ಸ್ಟೀಮಿಂಗ್ ಚರ್ಮದ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳನ್ನು ಮೃದುವಾಗಿಸಿ, ತೊಡೆದುಹಾಕಲು ಸಹಾಯ ಮಾಡುತ್ತದೆ. ಮೊಡವೆಗಳ ನಿವಾರಣೆಗೆ ಉತ್ತಮ ಪರಿಹಾರವಾಗಿದೆ. ಮೊಡವೆ ಸಮಸ್ಯೆಯಿಲ್ಲದಿದ್ದರೂ ಸ್ಟೀಮಿಂಗ್ ಮಾಡಿಕೊಳ್ಳುವುದರಿಂದ ಮುಚ್ಚಿದ ರಂದ್ರಗಳು ಸ್ವಚ್ಛಗೊಳ್ಳುತ್ತವೆ.
ಚರ್ಮದ ಮೇಲಿನ ವಯಸ್ಸಾದ ಚಿಹ್ನೆ ನಿವಾರಿಸುತ್ತದೆ:
ಮುಖದ ಮೇಲೆ ರಕ್ತಪರಿಚಲನೆಯನ್ನು ಸುಧಾರಿಸಲು ಫೇಶಿಯಲ್ ಸ್ಟೀಮಿಂಗ್ ಉತ್ತಮ ಪರಿಹಾರವಾಗಿದೆ. ಇದು ಮುಖದ ಮೇಲಿನ ಕೋಶಗಳಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಗುಲಾಬಿ ಮತ್ತು ಹೊಳೆಯುವ ಕೆನ್ನೆಗಳನ್ನಾಗಿ ಪರಿವರ್ತಿಸಲು ಫೇಶಿಯಲ್ ಸ್ಟೀಮಿಂಗ್ ಸಹಾಯ ಮಾಡುತ್ತದೆ. ಇದರಿಂದ ವಯಸ್ಸಿನ ಚಿಹ್ನೆ ಮಾಯವಾಗಿ, ಚರ್ಮಕ್ಕೆ ಕಾಂತಿಯನ್ನು ಹೆಚ್ಚಿಸುತ್ತದೆ.
ಮುಖದ ತ್ವಚೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ :
ಮುಖದ ಚರ್ಮವನ್ನು ಚೆನ್ನಾಗಿರಿಸಿಕೊಳ್ಳಲು ಸರಳ ಮಾರ್ಗವೆಂದರೆ ಚರ್ಮವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು. ಆದ್ದರಿಂದ ಫೇಶಿಯಲ್ ಸ್ಟೀಮಿಂಗ್ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ. ಇದು ಮುಖದ ಮೇಲಿನ ಮುಚ್ಚಿರುವ ರಂದ್ರಗಳನ್ನು ತೆರೆದು, ಬ್ಯಾಕ್ಟೀರಿಯಾ, ಮತ್ತು ಕೊಳಕನ್ನು ತೊಡೆದುಹಾಕುತ್ತದೆ. ಪರಿಣಾಮವಾಗಿ ಡೆಡ್ಸ್ಕಿನ್ಗಳು ದೂರವಾಗಿ ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ.
