ಉಡುಪಿ: ಸಮೀಪದ ಮನೆಯೊಂದರಲ್ಲಿ ಮಹಿಳೆ ಒಂಟಿಯಾಗಿರುವುದನ್ನು ಗಮನಿಸಿ ಚಿನ್ನದ ನೆಕ್ಲೇಸ್ ಕದ್ದು ಪರಾರಿಯಾದ ಘಟನೆ ನಡೆದಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ಬೆನ್ನು ಹತ್ತಿದ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏಪ್ರಿಲ್ ಒಂದರಂದು ಮಧ್ಯಾಹ್ನ ಸರಿ ಸುಮಾರು 1 ಘಂಟೆಯ ಸಮಯ ಚೆರ್ಕಾಡಿ ಸಮೀಪದ ಕನ್ನಾರು ನಿವಾಸಿ ವಾಸು ಪೂಜಾರಿ ಮನೆಯಲ್ಲಿ ಅವರ ಹೆಂಡತಿ ಒಂಟಿಯಾಗಿರುವ ಸಮಯ ಕಳ್ಳ ತನ್ನ ಕರಾಮತ್ತು ತೋರಿಸಿದ್ದ, ವಾಸು ಪೂಜಾರಿಯವರ ಹೆಂಡತಿ ಮನೆ ಹೊರಗೆ ಪಾತ್ರ ತೊಳೆಯುವಾಗ ಮನೆ ಒಳಗೆ ನುಗ್ಗಿದ ಖದೀಮ 10 ಗ್ರಾಂ ಚಿನ್ನದ ನೆಕ್ಲೇಸ್ ಕದ್ದು ಪರಾರಿಯಾಗಿದ್ದಾನೆ.
ಶ್ರೀ ಅನಂತ ಪದ್ಮನಾಭರವರ ಮಾರ್ಗದರ್ಶನದಂತೆ ಪಿ. ಎಸ್. ಐ ಗುರುನಾಥ್ ಬಿ ಹಾದಿಮನಿ ಹಾಗೂ ಪಿ. ಎಸ್. ಐ ಶ್ರೀಮತಿ ಮುಕ್ತಬಾಯಿಯವರ ನೇತೃತ್ವದ ವಿಶೇಷ ತಂಡ ರಚಿಸಿ, ತಾಂತ್ರಿಕ ಸಹಾಯವಿಲ್ಲದೆ ಸಾರ್ವಜನಿಕರಿಂದ ಮಾಹಿತಿ ಕಲೆಹಾಕಿ ಆರೋಪಿ ಕಳವು ಮಾಡಿದ ದಿವಸ ಧರಿಸಿದ ಬಟ್ಟೆ ಜಾಡನ್ನು ಕೊನೆಗೂ ಆರೋಪಿಯನ್ನು ಪತ್ತೆ ಮಾಡಿ 50,000 ಮೌಲ್ಯದ ಚಿನ್ನದ ನೆಕ್ಲೇಸ್ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಸುರೇಶ್ ಸುರೇಶ್ ಎಂದು ಗುರುತಿಸಲಾಗಿದ್ದು, ಈತ ಮೇಲೆ ಈ ಹಿಂದೆಯೂ ಅನೇಕ ಕಳ್ಳತನದ ಪ್ರಕರಣಗಳು ದಾಖಲಾಗಿದ್ದವು.