ಒಡಿಶಾ : ಪ್ರೀತಿಸಿದ ಯುವತಿ ಮದುವೆಯಾಗುವಂತೆ ಕಾಡುತ್ತಿದ್ದ ಯುವತಿಯ ಕೋಪಗೊಂಡ ಪ್ರಿಯಕರ ಯುವತಿಯನ್ನು ಬರೋಬ್ಬರಿ 49 ಬಾರಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘೋರ ಘಟನೆ ಒಡಿಶಾದ ಭುವನೇಶ್ವರದಲ್ಲಿ ಬೆಳಕಿಗೆ ಬಂದಿದೆ.
ಕೊಲೆ ಆರೋಪಿಯನ್ನು ಜಗನ್ನಾಥ ಗೋಡಾ ಎಂದು ಗುರುತಿಸಲಾಗಿದ್ದು, ಕೊಲೆಯಾದ ಯುವತಿಯನ್ನು ಕುಣಿದಾರ್ ಸೀಮಾದಾಸ್ ಎಂದು ಗುರುತಿಸಲಾಗಿದೆ.
ಆರೋಪಿ ಯುವತಿಯನ್ನು ಗುಜರಾತಿ ಯುವತಿಯನ್ನು ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿ ಈ ಮೊದಲೇ ಕೊಲೆ ಮಾಡಲು ಯೋಜಿಸಿದ್ದನು. ಅದರಂತೆ ಯುವತಿಯನ್ನು ಗುಜರಾತಿಗೆ ಕರೆದುಕೊಂಡು ಹೋಗಿದ್ದನು. ಸ್ಥಳವನ್ನು ತಲುಪಿದ ಸಂತ್ರಸ್ತೆಯ ಮೇಲೆ ಮನಬಂದಂತೆ ಚಾಕುವಿನಿಂದ ಇರಿದ್ದನು. ಬರೋಬ್ಬರಿ 49 ಬಾರಿ ಇರಿದು ಕೊಲೆ ಮಾಡಿ ಬಳಿಕ ಶವವನ್ನು ನಿರ್ಜನ ಗದ್ದೆಗೆ ಎಸೆದು ಬಂದಿದ್ದನು.
ಈ ಸಂಬಂಧ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಯಗಳ ಆದಾರದ ಮೇಲೆ ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ವಿಚಾರಣೆ ನಡೆಸಿದ್ದರು. ಬಳಿಕ ಸಂತ್ರಸ್ತೆ ಧರಿಸಿದ್ದ ಟೀ ಶರ್ಟ್‌ನಿಂದ ಪೊಲೀಸರಿಗೆ ಆರೋಪಿ ಪತ್ತೆಗೆ ದಾರಿ ಸಿಕ್ಕಿತ್ತು.
ಅಂತಿಮವಾಗಿ, ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಿಯನ್ನು ಭುವನೇಶ್ವರದಲ್ಲಿ ಬಂಧಿಸಿದ್ದಾರೆ. ಅಪರಾಧದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿಷಯದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.