ಬೆಂಗಳೂರು: ಎಸ್ಎಸ್ಎಲ್ಸಿ ಫಲಿತಾಂಶ ಬಿಡುಗಡೆಗೆ ತಾತ್ಕಾಲಿಕ ದಿನಾಂಕ ನಿಗಧಿ ಮಾಡಿದ್ದು, ಮೇ 12ರಂದು ಫಲಿತಾಂಶ ಬಿಡುಗಡೆಯಾಗಲಿದೆ ಎಂದಿದೆ.
ಏಪ್ರಿಲ್ 12ರಿಂದಲೇ ವೆಬ್ಸೈಟ್ನಲ್ಲಿ ಕೀ ಉತ್ತರಗಳು ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು 3 ದಿನಗಳ ಕಾಲಾವಕಾಶ ನೀಡಲಾಗಿದೆ. ಇನ್ನು ಮೇ 12ರಂದು ಎಸ್ಎಸ್ಎಲ್ಸಿ ಅಂತಿಮ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಎಸ್ಎಸ್ಎಲ್ಸಿ ಪರೀಕ್ಷಾ ಮಂಡಳಿ ತಿಳಿಸಿದೆ.