ನವದೆಹಲಿ : ಭಾರತದ ಮಾಜಿ ಕ್ರಿಕೆಟಿಗ, ಎಡಗೈ ಸ್ಪಿನ್ನರ್ ಬಿಶೆನ್ ಸಿಂಗ್ ಬೇಡಿ (77) ಅವರು ನಿಧನರಾದರು.ಸೆಪ್ಟೆಂಬರ್ 25., 1946 ರಂದು ಭಾರತದ ಅಮೃತಸರದಲ್ಲಿ ಜನಿಸಿದ ಬಿಷನ್ ಸಿಂಗ್ ಬೇಡಿ ಎಡಗೈ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು.ವಿಶಿಷ್ಟ ಶೈಲಿಯಲ್ಲಿ ಸ್ನಿನ್ ಬೌಲಿಂಗ್ ಮಾಡುತ್ತಿದ್ದ ಬೇಡಿ ಅವರು, 1971 ರಲ್ಲಿ ಇಂಗ್ಲೆಂಡ್ ವಿರುದ್ದದ ಏಕದಿನ ಪಂದ್ಯಕ್ಕೆ ಭಾರತದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರು.
ಆ ಮೂಲಕ ಇಂಗ್ಲೆಂಡ್ ವಿರುದ್ಧದ ಭಾರತದ ಐತಿಹಾಸಿಕ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎರಪಳ್ಳಿ ಪ್ರಸನ್ನ, ಬಿಎಸ್ ಚಂದ್ರಶೇಖರ್ ಮತ್ತು ಎಸ್. ವೆಂಕಟರಾಘವನ್ ಅವರೊಂದಿಗೆ ಬೇಡಿ ಭಾರತದ ಬೌಲಿಂಗ್ ಇತಿಹಾಸದಲ್ಲಿ ಅಚ್ಚಳಿಯದ ಸಾಧನೆಯನ್ನು ಮಾಡಿದ್ದಾರೆ.
1975 ರ ವಿಶ್ವಕಪ್ ಪಂದ್ಯದಲ್ಲಿ ಮಾಡಿದ ಬೌಲಿಂಗ್ ದಾಳಿಯಿಂದ ಪೂರ್ವ ಆಫ್ರಿಕಾ 120 ರನ್ ಗಳಿಗೆ ಸರ್ವಪತನವಾಗಿತ್ತು.
1967 – 1979 ರ ನಡುವೆ ಭಾರತ ತಂಡದಲ್ಲಿ ಪ್ರಮುಖ ಸ್ಪಿನ್ನ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ಬೇಡಿ 67 ಟೆಸ್ಟ್ ಪಂದ್ಯಗಳಲ್ಲಿ 266 ವಿಕೆಟ್ ಗಳನ್ನು ಪಡೆದಿದ್ದರು.
10 ಏಕದಿನ ಪಂದ್ಯದಲ್ಲಿ 7 ವಿಕೆಟ್ ಗಳನ್ನು ಪಡೆದಿದ್ದರು.
ಆಟದಿಂದ ನಿವೃತ್ತರಾದ ಬಳಿಕವೂ ಕ್ರಿಕೆಟ್ ವಿಚಾರವಾಗಿ ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು.
ಬೇಡಿ ಅವರು ತಮ್ಮ ಪುತ್ರ ಮತ್ತು ಬಾಲಿವುಡ್ ನಟ ಅಂಗದ್ ಬೇಡಿ ರನ್ನು ಅಗಲಿದ್ದಾರೆ.