ಮಂಗಳೂರು: ಗಡಿಭಾಗದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಳ ಪಚ್ಚಂಪಾರೆಯಲ್ಲಿ ತಾಯಿ ತನ್ನ ಒಂದೂವರೆ ತಿಂಗಳ ಹೆಣ್ಣು ಮಗುವನ್ನು ಕೆಸರು ನೀರಿನಲ್ಲಿ ಮುಳುಗಿಸಿ ಕೊಲೆಗೈದ ಘಟನೆ ನಡೆದಿದೆ. ಮೃತ ಒಂದೂವರೆ ತಿಂಗಳ ಶಿಶು ಸುಮಂಗಲಿ-ಸತ್ಯನಾರಾಯಣ ದಂಪತಿಯ ಪುತ್ರಿ ಎಂದು ಗುರುತಿಸಲಾಗಿದ್ದು,ತಾಯಿ ಮತ್ತು ಮಗು ನಾಪತ್ತೆಯಾದುದರಿಂದ ಮನೆಯವರು ಹುಡುಕಾಡಿದಾಗ ತಾಯಿಯನ್ನು ಮನೆಯ ಅಲ್ಪದೂರದಿಂದ ಪತ್ತೆ ಹಚ್ಚಲಾಗಿದ್ದು, ಮಗು ನಾಪತ್ತೆಯಾಗಿತ್ತು, ಈ ಬಗ್ಗೆ ವಿಚಾರಿಸಿದಾಗ ಮಗುವನ್ನು ಸಮೀಪದ ಬಯಲಿನಲ್ಲಿ ಕೆಸರು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಳು, ಕೂಡಲೇ ಮಗುವನ್ನು ಮೇಲಕ್ಕೆತ್ತಿ ಉಪ್ಪಳದ ಮಂಗಲ್ಪಾಡಿ ಆಸ್ಪತ್ರೆಗೆ ಕರೆದೊಯ್ದರೂ ಆಗಲೇ ಮೃತಪಟ್ಟಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥತೆಯಂತೆ ವರ್ತಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
©2021 Tulunada Surya | Developed by CuriousLabs