ಉಡುಪಿ: ದೈವ- ದೇವರ ನಾಡು ತುಳುನಾಡು ಕಾರ್ಣಿಕಗಳ ಪುಣ್ಯ ಭೂಮಿ ಕೂಡ ಹೌದು, ದಿನ ನಿತ್ಯ ಅನೇಕ ಪವಾಡಗಳು ಈ ಮಣ್ಣಿನಲ್ಲಿ ಘಟಿಸುತ್ತಿವೆ.
ಇದೀಗ ಅಂತಹುದೇ ಪವಾಡ ಈ ಕರಾವಳಿಯ ಮಣ್ಣಲ್ಲಿ ನಡೆದಿದೆ ಎನ್ನಲಾಗಿದ್ದು, ಇದು ತುಳುನಾಡ ದೈವ ಕೊರಗಜ್ಜನ ಮಹಿಮೆ ಎಂದೇ ಭಕ್ತರು ನಂಬಿದ್ದಾರೆ.
ಉಡುಪಿಯ ಕುಂದಾಪುರ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ನಿನ್ನೆ ರಾತ್ರಿ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ನಿದ್ದೆ ಕಣ್ಣಲ್ಲಿ ಆ ಕರಾಳ ರಾತ್ರಿಯಲ್ಲಿ ನಡೆಯುತ್ತಿದ್ದ ಮಗುವನ್ನು ಕೊರಗಜ್ಜ ತಡೆದು ನಿಲ್ಲಿಸಿ ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ನಿದ್ದೆ ಕಣ್ಣಿನಿಂದ ರಾತ್ರಿಯ ಮೂರು ಗಂಟೆ ಸುಮಾರಿಗೆ ರಸ್ತೆಯಲ್ಲಿ ಒಂಟಿಯಾಗಿ ಏನು ಅರಿಯದ ಸುಮಾರು ಆರು ವರ್ಷದ ಹೆಣ್ಣು ಮಗು ನಡೆದುಕೊಂಡು ಬಂದು ಕೊರಗಜ್ಜ ದೈವಸ್ಥಾನ ನಾಮಪಲಕದ ಬಳಿ ನಿಂತಿದೆ.
ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವವರು ಮಗುವನ್ನು ನೋಡಿ ಕಾರು ನಿಲ್ಲಿಸಿದ್ದಾರೆ.
ಬಳಿಕ ಮಗುವಿನ ಬಳಿ ಹೋಗಿ ಮಾತಾಡಿಸಿದಾಗ ನಿದ್ದೆ ಕಣ್ಣಿನಿಂದ ನಡೆದುಕೊಂಡು ಬಂದ ವಿಷಯ ಬೆಳಕಿಗೆ ಬಂದಿದ್ದು, ಮಗುವನ್ನು ಸುರಕ್ಷಿತವಾಗಿ ಮರಳಿ ಮನೆಗೆ ಹೋಗಿ ಬಿಟ್ಟು ಮಾನವೀಯತೆ ಮರೆದಿದ್ದಾರೆ.
ಕೊರಗಜ್ಜನ ಪವಾಡದಿಂದಲೇ ಏನೂ ಅಪಾಯವಾಗದೆ ಮಗು ಪಾರಾಗಿ ಬಂದಿದೆ ಅಂತ ಭಕ್ತರು ನಂಬಿ ನಂಬಿದ್ದಾರೆ.