ಮೈಸೂರು : ಮೈಸೂರು ಜಿಲ್ಲೆಯ ಘೋರ ದುರಂತವೊಂದು ನಡೆದಿದ್ದು, ಸುತ್ತಿಗೆಯಿಂದ ಹೊಡೆದು ತಂದೆಯೇ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದಲ್ಲಿ ಶ್ರೀಕಾಂತ್ ಎಂಬಾತ ತನ್ನ ಇಬ್ಬರು ಮಕ್ಕಳಾದ ಆದಿತ್ಯ (3) ಹಾಗೂ ಅಮೂಲ್ಯ (4) ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಬಳಿಕ ಪತ್ನಿ ಲಕ್ಷ್ಮೀ ಮೇಲೂ ಹಲ್ಲೆ ಮಾಡಿದ್ದು, ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮರಳಗಾಲ ಗ್ರಾಮದ ಆಲೆಮನೆಯಲ್ಲಿ ಶ್ರೀಕಾಂತ್ ಕುಟುಂಬ ಕೆಲಸ ಮಾಡುತ್ತಿತ್ತು. ಮೂಲತಃ ಇವರು ಕಲಬುರಗಿ ಜಿಲ್ಲೆಯ ಜೇವರ್ಗಿಯವರಾಗಿದ್ದು, ಕೆಲಸಕ್ಕಾಗಿ ಮರಳಗಾಲ ಗ್ರಾಮದಲ್ಲಿ ವಾಸವಾಗಿದ್ದರು. ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಬಳಿಕ ಶ್ರೀಕಾಂತ್ ಪರಾರಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.