ಸುಳ್ಯ: ಸುಮಾರು 19 ವರ್ಷಗಳಿಂದ ಪ್ರಕರಣವೊಂದಕ್ಕೆ ಸಂಭಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ್ದು, ಆರೋಪಿಯನ್ನು ಮಾನ್ಯ ನ್ಯಾಯಾಲಯದ ಆದೇಶದಂತೆ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
2003ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಭಂಧಿಸಿದಂತೆ ಕೇರಳ ವಯನಾಡ್ ಜಿಲ್ಲೆಯ ವೈತಿರಿ ತಾಲೂಕಿನ ಕಲ್ಲವಳಿಪ್ಪಲ್ ನಿವಾಸಿ ಕೆ. ಎಂ ಸಿದ್ದಿಕ್ ಎಂಬಾತನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ CC/1338/2003ರಂತೆ 457,380 ಸೆಕ್ಷನ್ ನಂತೆ ಪ್ರಕರಣ ದಾಖಲಾಗಿತ್ತು. ವಾರೆಂಟುದಾರ ನಾಗಿರುವ ಮತ್ತು A1 ಆರೋಪಿಯಾಗಿರುವ ಸಿದ್ದಿಕ್ ಪೋಲೀಸರ ಕಣ್ಣು ತಪ್ಪಿಸಿ 19 ವರ್ಷಗಳಿಂದ ಪರಾರಿಯಾಗಿದ್ದ.
ಇದೀಗ ಆರೋಪಿಯನ್ನು ಬಂಧಿಸಿರುವ ಸುಳ್ಯ ಪೊಲೀಸರು ಆತತನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ.
