ಶ್ರೀ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿನಂದನಾ ಸಮಿತಿ ದೇರಳಕಟ್ಟೆ ವತಿಯಿಂದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ರವರ 50 ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮ ಇಂದು ನಡೆಯಿತು.
ಸಮಾಜ ಸೇವಾ ಕಾರ್ಯಗಳು, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆಯ ಪೂರ್ವಭಾವಿ ಸಭೆಯು ಕುತ್ತಾರು ರಾಜರಾಜೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಪ್ರಧಾನ ಸಂಚಾಲಕರಾದ ಶ್ರೀ ಕೆ ರವೀಂದ್ರ ರೈ ಕಲ್ಲಿಮಾರು ಕೊಣಾಜೆ ಇವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ ರವರು ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಶುಭ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಿರುವ ಬಿಜೆಪಿ ಮುಖಂಡರಾಗಿರುವ ಶ್ರೀ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಗೌರವ ಸಲಹೆಗಾರರಾದ ಚಂದ್ರಹಾಸ ಅಡ್ಯಂತಾಯ, ಕೆ ಟಿ ಸುವರ್ಣ, ಚಂದ್ರಹಾಸ್ ಉಳ್ಳಾಲ್, ಹರೀಶ್ ಕುತ್ತಾರ್, ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಪವಿತ್ರ ಕುಮಾರ್ ಗಟ್ಟಿ ಕುತ್ತಾರ್, ಮಹಿಳಾ ಸಂಚಾಲಕಿಯಾದ ಶ್ರೀಮತಿ ಧನಲಕ್ಷ್ಮಿ ಗಟ್ಟಿ, ಪ್ರೊಪೆಸರ್ ರವಿಶಂಕರ್ ಹಾಗೂ ನಿವೃತ್ತ ಶಿಕ್ಷ ಕಿಯಾದ ಸೀತಾಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡರಾದ ಚಂದ್ರಶೇಖರ್ ಉಚ್ಚಿಲ್ ರವರ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ವೇದಿಕೆಯಲ್ಲಿ ಶಾಲು ಹಾಕಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತೋನ್ಸೆ ಪುಷ್ಕಲ್ ಕುಮಾರ್ ರವರು ಪ್ರಾರ್ಥನೆ ಹಾಡಿದರು. ಕೆ ರವೀಂದ್ರ ರೈ ಕಲ್ಲಿಮಾರ್ ಸ್ವಾಗತ ಮಾಡಿದರು. ಆನಂದ ಶೆಟ್ಟಿ ಭಟ್ನಗರ ಕಾರ್ಯಕ್ರಮ ನಿರೂಪಿಸಿದರು.
