ಜಪಾನ್ ನ (Japan) ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ (Former Prime Minister Shinzo Abe) ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಜಪಾನ್ ನ ನಾರಾ ನಗರದಲ್ಲಿ ನಡೆದಿದೆ.
ಜಪಾನ್ ನ ನಾರಾ ನಗರದಲ್ಲಿ ಮಾಜಿ ಪ್ರಧಾನಿ ಶಿಂಜೊ ಅಬೆ ಮೇಲೆ ಗುಂಡಿನ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.
ಭಾಷಣ ಮಾಡುವಾಗ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ನಾರಾ ನಗರದಲ್ಲಿ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದಾರೆ. , ಸದ್ಯ ಶಂಕಿತರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ
ಇಂದು ಪಶ್ಚಿಮ ಜಪಾನ್ ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಜಪಾನ್ ಮೂಲದ ಮಾಧ್ಯಮ ಸಂಸ್ಥೆ ಎನ್ ಹೆಚ್ ಕೆ ವರದಿ ಮಾಡಿದೆ. ‘ಜಪಾನಿನ ಮಾಜಿ ಪ್ರಧಾನಿ ಅಬೆ ಶಿಂಜೊ ಅವರು ಪಶ್ಚಿಮ ಜಪಾನ್ ನ ನಾರಾ ನಗರದಲ್ಲಿ ಭಾಷಣ ಮಾಡುವಾಗ ಹಿಂದಿನಿಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಶಿಂಜೋ ಅಬೆ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
