ಮಂಗಳೂರು: ಕರಾವಳಿಯ ಪ್ರಸಿದ್ಧ ನಾಗ ಕ್ಷೇತ್ರದಲ್ಲೊಂದಾದ ಕುಡುಪು ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನಲ್ಲಿ ಷಷ್ಠಿ ಮಹೋತ್ಸವ ವೈಭವದಿಂದ ನಡೆಯುತ್ತಿದ್ದು, ನಿನ್ನೆ ರಾತ್ರಿ ದೇವರ ಸವಾರಿ ಬಲಿ, ಕಟ್ಟೆಪೂಜೆಗಳು, ತೆಪ್ಪೋತ್ಸವ ಚಂದ್ರಮಂಡಲ ಉತ್ಸವ, ಆಶ್ವವಾಹನೋತ್ಸವ, ಪಾಲಕಿ ಉತ್ಸವಗಳು ವಿಜೃಂಭಣೆಯಿಂದ ನಡೆದಿವೆ.
ಇಂದು ಬೆಳ್ಳಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಅಗಮಿಸುತ್ತಿದ್ದಾರೆ. ಅನಂತ ಪದ್ಮನಾಭ ಸ್ವಾಮಿಗೆ ಸೀಯಾಳ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆಯುತ್ತಿದೆ. ಇಂದು ಮಧ್ಯಾಹ್ನ ದೇವರ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ.