ದೆಹಲಿ : ಶಂಕಿತ ಐಸಿಸ್ ಉಗ್ರ ಶಹನ್ವಾಜ್ ಅಲಿಯಾಸ್ ಶಫಿಯನ್ನು ಬಂಧಿಸಲಾಗಿದೆ. ದೆಹಲಿಯ ವಿಶೇಷ ಪೊಲೀಸ್ ತಂಡವು ಶಫಿಯನ್ನು ಬಂಧಿಸಿದೆ, ಉಗ್ರರ ಬಗ್ಗೆ ಸುಳಿವು ಕೊಟ್ಟವರಿಗೆ ಎನ್‌ಐಎ 3 ಲಕ್ಷ ರೂ ಬಹುಮಾನವನ್ನು ಘೋಷಿಸಿತ್ತು. ಪೊಲೀಸರ ಪ್ರಕಾರ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಹನವಾಜ್ ಮೂಲತಃ ದೆಹಲಿಯವ ಎಂದು ಹೇಳಲಾಗುತ್ತಿದೆ.
ನಿನ್ನೆಯಿಂದ ದೇಶದದಾದ್ಯಂತ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಎನ್‌ಐಎ ಉಗ್ರರ ಕುರಿತಂತೆ ಮಾಹಿತಿ ನೀಡಿದವರಿಗೆ ಮೂರು ಲಕ್ಷ ಬಹುಮಾನ ಘೋಷಿಸಿತ್ತು.ಇದೀಗ ಉಗ್ರರ ಮಾಸ್ಟರ್ ಮೈಂಡ್ ಶಹನವಾಜ್ ಆಲಂ ನನ್ನು ಎನ್.ಐ.ಎ ಬಂಧಿಸಿದೆ .
ISIS ಪುಣೆ ಮಾಡ್ಯೂಲ್ ಪ್ರಕರಣದಲ್ಲಿ NIA 7 ಜನರನ್ನು ಬಂಧಿಸಿತ್ತು. ಈ ವೇಳೆ ಮೂವರು ಉಗ್ರರು ತಪ್ಪಿಸಿಕೊಂಡು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದರು. ಈ ಮೂವರು ಭಯೋತ್ಪಾದಕರಲ್ಲಿ ಒಬ್ಬ ಶಹನವಾಜ್ ಅಲಿಯಾಸ್ ಶಫಿ ಉಜ್ಜಾಮ. ಮೂವರು ಐಸಿಸ್ ಉಗ್ರರು ರಾಜಧಾನಿಯಲ್ಲಿ ಅಡಗಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದಾದ ಬಳಿಕ ಪೊಲೀಸರು ಅಲರ್ಟ್ ಮೋಡ್‌ಗೆ ಬಂದು ಮೂವರಿಗಾಗಿ ಹುಡುಕಾಟ ಆರಂಭಿಸಿದ್ದರು.