Friday, March 29, 2024
spot_img
More

    Latest Posts

    ಗುರುವಾಯನ ಕೆರೆಯ ಮೀನುಗಳ ಸಾವಿಗೆ ಕೊಳಚೆ ನೀರು ಕಾರಣ

    ಗುರುವಾಯನಕೆರೆ: 14 ಕ್ವಿಂಟಾಲ್‌ಗೂ ಹೆಚ್ಚು ಮೀನುಗಳ ಮಾರಣ ಹೋಮ, ವಾಸನೆಯಿಂದ ಆತಂಕಗೊಂಡಿದ್ದ ಕೆರೆಮೇಲ್ ಜನತೆ, ನೀರು ಮಲಿನ ಆಗುವುದಕ್ಕೆ ಖಾಸಗಿ ಕಾಲೇಜಿನವರು ಕಾರಣ ಅಂತ ಹೇಳುತ್ತಿದ್ದ ಕೆಲವರು, ಇಲ್ಲ ಈ ನೀರಿಗೆ ಯಾರೋ ವಿಷ ಹಾಕಿದ್ದಾರೆ ಅಂತ ಹೇಳುವ ಮತ್ತೆ ಕೆಲವರು, ಮೀನುಗಾರರ ನಡುವೆಯೇ ಏನೋ ನಡೆದಿದೆ, ಅವರಿಂದಲೇ ನೀರು ಮಲಿನವಾಗಿದೆ ಅಂತ ಆರೋಪಿಸುವವರ ದಂಡು. ಇದೆಲ್ಲದರ ನಂತರ ಗುರುವಾಯನಕೆರೆಯ ಮೀನುಗಳ ಮಾರಣ ಹೋಮ ಸುದ್ದಿ ಸೈಲೆಂಟ್ ಆಗಿತ್ತು. ಕುವೆಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಎರಡು ಸಂಸ್ಥೆಗಳಿಗೆ ಗುರುವಾಯನಕೆರೆಯ ನೀರು ಪರೀಕ್ಷೆಗೆ ಕಳುಹಿಸಲಾಗಿತ್ತು.
    ಗುರುವಾಯನಕೆರೆಯ ನೀರಿನಲ್ಲಿ ಆಮ್ಲಜನಕದ ಕೊರತೆಯಿಂದ ಮೀನುಗಳು ಸಾಯುತ್ತಿವೆ ಅನ್ನುವುದು ಪ್ರಾಥಮಿಕವಾಗಿ ಗೊತ್ತಾಯ್ತು. ಆ ನಂತರ ಗುರುವಾಯನಕೆರೆಯ ನೀರನ್ನು ಕುವೆಟ್ಟು ಗ್ರಾಮ ಪಂಚಾಯತ್ ಪರೀಕ್ಷೆಗೆಂದು ಮಂಗಳೂ ರಿನ ಖಾಸಗಿ ಲ್ಯಾಬ್ ಗೆ ಕಳುಹಿಸಿದ್ದರು. ನಂತರ ಮೀನುಗಾರಿಕಾ ಕಾಲೇಜಿನವರು ಬಂದು ನೀರು, ಮಣ್ಣು ಹಾಗೂ ಸತ್ತ ಮೀನುಗಳನ್ನು ಪರೀಕ್ಷೆಗೆಂದು ತೆಗೆದುಕೊಂಡು ಹೋಗಿದ್ದರು. ಇದಾದ ಮೇಲೂ ಆರೋಪ ಪ್ರತ್ಯಾರೋಪಗಳು ಗುರುವಾಯನಕೆರೆಯ ವಿಚಾರದಲ್ಲಿ ಜೋರಾ ಗಿಯೇ ನಡೆಯುತ್ತಿತ್ತು. ಖಾಸಗಿ ಸಂಸ್ಥೆ ಮತ್ತು ಮೀನುಗಾರಿಕಾ ಕಾಲೇಜಿನವರು ನಡೆಸಿರುವ ನೀರು ಪರೀಕ್ಷೆಯ ವರದಿ ಈಗಾಗ್ಲೇ ಗ್ರಾಮ ಪಂಚಾಯತ್ ಕೈ ಸೇರಿದೆ. ಇದರಲ್ಲಿ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗಿರುವ ಕಾರಣವನ್ನು ತಿಳಿಸಲಾಗಿತ್ತು. ಅಲ್ಲದೇ ನೈಟ್ರೇಟ್, ಅಮೋನಿಯಾ ಮುಂತಾದ ಅಂಶಗಳು ನೀರಿನಲ್ಲಿ ಪತ್ತೆಯಾಗಿವೆ ಎಂಬ ವಿಚಾರವೂ ಮೇಲ್ನೋಟಕ್ಕೆ ಕಾಣಿಸುತ್ತಿತ್ತು. ಆದರೆ ಈ ಆಮ್ಲಜನಕ ಹೆಚ್ಚಾಗಲು ಕಾರಣವೇನು, ಯಾವ ಕಾರಣಕ್ಕಾಗಿ ನೀರು ಮಲಿನವಾಗಿದೆ, ಮೀನುಗಳ ಸಾವಿಗೆ ನೀರಿನ ಪರೀಕ್ಷೆಯಲ್ಲಿ ಕಾರಣವೇನಾದರೂ ಸಿಕ್ಕಿದ್ಯಾ ಅನ್ನುವ ಕುರಿತು, ನೀರು ಪರೀಕ್ಷೆ ಮಾಡಿರುವ ಮೀನುಗಾರಿಕಾ ಇಲಾಖೆಯವರನ್ನೇ ಸುದ್ದಿ ನ್ಯೂಸ್ ಸಂಪರ್ಕಿಸಿ ಸಂದರ್ಶನ ನಡೆಸಿದೆ
    ನೀರಿನ ಸ್ಯಾಂಪಲ್ 1 ರಲ್ಲಿ 31. 50, ಸ್ಯಾಂಪಲ್ 2ರಲ್ಲಿ 31. 20 ಮತ್ತು 3ನೇ ಸ್ಯಾಂಪಲ್ ನಲ್ಲಿ 31. 40ಯಷ್ಟಿದೆ ಅಂತ ವರದಿಯಲ್ಲಿದೆ. ಇನ್ನು ಡಿಸಾಲ್ವುಡ್ ಆಕ್ಸಿಜನ್ 5 ರಿಂದ 9 ರಷ್ಟಿರಬೇಕಿತ್ತು, ಆದರೆ ಇಲ್ಲಿ 3. 84, 4. 07 ಮತ್ತು 4. 10ರಷ್ಟಿದೆ. ಆದರೆ ಇಲ್ಲಿ ಅದರ ಲೆವೆಲ್ ಕೂಡ 2. 10, 2. 25, 2. 10ರಷ್ಟಿದೆ ಅಂತ ಕೊಡಲಾಗಿದೆ. ಇವೆಲ್ಲ ಅಂಕಿಅಂಶಗಳನ್ನು ನೋಡಿ ದಾಗ ನೀರಿನಲ್ಲೀ ಆಮ್ಲಜನಕದ ಕೊರತೆಯಿದೆ. ಇದಕ್ಕಾಗಿ ಮೀನುಗಳು ಸಾವನ್ನಪ್ಪಿದವು ಅನ್ನು ವುದು ಗೊತ್ತಾಗುತ್ತೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss