ಮಂಗಳೂರು: ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳೂರು ಪರಿಸರದಲ್ಲಿ ರಿಕ್ಷಾದಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಮೂವರನ್ನು ಸೆರೆಹಿಡಿದು ಅವರಿಂದ 2 ಕೆಜಿ. 133 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಗಾಂಜಾ ಮಾರಾಟಕ್ಕೆ ಬಳಕೆ ಮಾಡುತ್ತಿದ್ದ ಆಟೋ ರಿಕ್ಷಾ ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಜೀಜುದ್ದಿನ್ ರಸ್ತೆಯ ಗಣೇಶ್ (28), ಡೊಂಗರಕೇರಿಯ ರಾಹುಲ್ ಗಟ್ಟಿ (25), ಕುದ್ರೋಳಿಯ ಅಭಿಲಾಷ್ (27) ಬಂಧಿತರು. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 1,36,000 ರೂ. ಆಗಿದೆ.
©2021 Tulunada Surya | Developed by CuriousLabs