ಬೆಂಗಳೂರು: ಇದೇ ಮೊದಲ ಬಾರಿಗೆ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆ ನಂತ್ರ, ಎರಡನೇ ಬಾರಿಗೆ ಪೂರಕ ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿ ವೇಳಾಪಟ್ಟಿ ಪ್ರಕಟಿಸಿತ್ತು. ಆದ್ರೇ ಕೆಲ ಕಾಲೇಜುಗಳು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರದ್ದುಗೊಳಿಸಲಾಗಿದೆ.
ರದ್ದುಗೊಳಿಸಲಾಗುತ್ತಿದೆ ಎನ್ನುವುದಾಗಿ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡ ಹೀಗೆ ಪೂರಕ ಪರೀಕ್ಷೆ ರದ್ದುಗೊಳಿಸಲಾಗಿದೆ ಎಂಬುದಾಗಿ ಹೇಳಿಕೊಂಡು ಓಡಾಡುವಂತ ಸುದ್ದಿಗಳು ಹರಡಿದ್ದವು. ಆದ್ರೇ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರದ್ದುಗೊಂಡಿಲ್ಲ. ಹರಿದಾಡುತ್ತಿರುವುದು ಸುಳ್ಳು ಸುದ್ದಿಯಾಗಿದೆ ಎಂಬುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಕೆಲವು ಕಾಲೇಜುಗಳು ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರದ್ದುಗೊಂಡಿದೆ ಎಂಬುದಾಗಿ ಹೇಳಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಇದೇ ಮಾತನ್ನು ಆಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಮಾಧ್ಯಮಗಳಲ್ಲಿಯೂ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರದ್ದುಗೊಂಡಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದ್ರೇ ಇವೆಲ್ಲವು ಸುಳ್ಳು. ಸತ್ಯಕ್ಕೆ ದೂರವಾಗಿರೋದಾಗಿ ತಿಳಿಸಿದೆ.
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರದ್ದುಗೊಂಡಿಲ್ಲ. ನಿಗದಿಯಂತೆ ನಡೆಯಲಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ದಿನಾಂಕ 21-08-2023ರ ಸೋಮವಾರದಂದಿ ಆರಂಭಗೊಂಡು, ದಿನಾಂಕ 02-09-2023ರವರೆಗೆ ನಡೆಯಲಿದೆ. ಈ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳುವಂತೆ ಮಾಹಿತಿ ನೀಡಿದ್ದಾರೆ.
ಈ ನಡುವೆ ಪರೀಕ್ಷೆ ನೋಂದಣಿಗೆ ಆಗಸ್ಟ್ 10 ನಾಳೆ ಕೊನೆಯ ದಿನವಾಗಿದೆ.
ಪೂರಕ ಪರೀಕ್ಷೆ -2 ವೇಳಾಪಟ್ಟಿ ಹೀಗಿದೆ
21-08-2೦23- ಸೋಮವಾರ- ಕನ್ನಡ ಹಾಗೂ ಅರೇಬಿಕ್
22-08-23- ಮಂಗಳವಾರ ಐಚ್ಛಿಕ ಕನ್ಬಡ, ರಾಸಾಯನ, ಮೂಲಗಣಿತ
23-08-23- ಬುಧವಾರ- ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
24-08-23- ಗುರುವಾರ- ತರ್ಕ ಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ವ್ಯಾವಹಾರ ಅಧ್ಯಯನ
25-08-23- ಶರವಾರ- ಇತಿಹಾಸ, ಸಂಖ್ಯಾಶಾಸ್ತ್ರ
26-08-23 ಇಂಗ್ಲಿಷ್
28-08-23- ಭೂಗೋಳಶಾಸದರತ, ಮನಃ ಶಾಸ್ತ್ರ, ಭೌತಶಾಸ್ತ್ರ
29-08-23- ಭೂಗರ್ಭ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ಶಾಸ್ತ್ರ
30-08-23 – ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ
21-08-23- ಹಿಂದಿ
01-09-2023 – ಅರ್ಥ ಶಾಸ್ತ್ರ, ಜೀವಶಾಸ್ತ್ರ