ಉಡುಪಿ : ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣದ ಪಂಚಾಯತ್ ವ್ಯಾಪ್ತಿಯಲ್ಲಿ ಜ್ಯೂಸ್ ಕುಡಿಯಲೆಂದು ತೆರಳಿದಾಗ ಮಾಲೀಕನ ಎದುರೇ ಸ್ಕೂಟರ್ ಎಗರಿಸಿದ ಪಂಗನಾಮ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ.
ಈ ನಡುವೆ ಕಳ್ಳರನಕ್ಕಾಗಿ ಖತರ್ನಾಕ್ ಐಡಿಯಾಗಳನ್ನು ಬಳಸುತ್ತಿದ್ದಾರೆ . ಆದ್ರೆ ಏ.9ರ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಕೋಟ ಸಮೀಪದ ಉಪ್ಲಾಡಿ ನಿವಾಸಿ ರವಿ ಅವರು ಸಾಲಿಗ್ರಾಮ ಪೇಟೆಯಲ್ಲಿರುವ ಐಸ್ ಸ್ಪೈಸ್ ರೆಸ್ಟೋರೆಂಟ್ ಮುಂಭಾಗ ಸ್ಕೂಟರ್ ನಿಲ್ಲಿಸಿ ಜ್ಯೂಸ್ ಕುಡಿಯುತ್ತಿದ್ದರು. ಈ ವೇಳೆ ಯಾವುದೋ ಗಡಿಬಿಡಿಯಲ್ಲಿ ಬೈಕ್ ಕೀಯನ್ನು ಅದರಲ್ಲೇ ಇಟ್ಟಿದ್ದರು. ಇದನ್ನು ಗಮನಿಸಿದ ಕಳ್ಳ ಹಿಂದೆ ತಿರುಗುತ್ತಿದ್ದಂತೆ ಸ್ಕೂಟರ್ ಎಗರಿಸಿದ ಪಂಗನಾಮ ಹಾಕಿದ್ದಾನೆ ಎಂದು ತಿಳಿಯಲಾಗಿದೆ.
