ನವದೆಹಲಿ: ಟೊಮೆಟೊ ಬೆಲೆಯು ಗಗನಕ್ಕೇರಿದ್ದು, ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಇಗಾಗಲೇ ಟೊಮೆಟೊ ಬೆಲೆ 100ರ ಗಡಿ ದಾಟಿದ್ದು, ಕೆಲವು ನಗರಗಳಲ್ಲಿ ತರಕಾರಿ ಕೆಜಿಗೆ 80-100 ರೂ.ಗೆ ಮಾರಾಟವಾಗುತ್ತಿದೆ. ಇಂದು ದೆಹಲಿಯಲ್ಲಿ ಟೊಮೆಟೊ ಬೆಲೆ ಕೆಜಿಗೆ 90-100 ರೂ.ಆಗಿದೆ.
ಸಗಟು ದರದಲ್ಲಿ 60-80 ಕೆ.ಜಿ.ಗೆ ಟೊಮೆಟೊ ಸಿಗುತ್ತಿದ್ದು, ಚಿಲ್ಲರೆ ಮಾರಾಟದಲ್ಲಿ 90-100 ರೂ.ಗೆ ಸಿಗಲಿದೆ. ದೆಹಲಿಯಲ್ಲಿ ಕಳೆದ 10-15 ದಿನಗಳಿಂದ ಮಳೆಯಿಂದಾಗಿ ದರ ಏರಿಕೆಯಾಗಿದೆ ಎಂದು ಟೊಮೆಟೊ ಮಾರಾಟಗಾರರು ಹೇಳುತ್ತಾರೆ.
ಟೊಮೇಟೊ ಬೆಳೆಯುವ ಪ್ರದೇಶಗಳಲ್ಲಿ ಬಿಸಿಗಾಳಿ ಮತ್ತು ಭಾರೀ ಮಳೆಯಿಂದಾಗಿ ಪೂರೈಕೆಯಲ್ಲಿನ ಕುಸಿತ ಇದಕ್ಕೆ ಕಾರಣ ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಟೊಮೇಟೊ ಕೆಜಿಗೆ 100 ರೂ.ಗೆ ತಲುಪಿದೆ. 1 ಕೆಜಿ ಅಗತ್ಯವಿದ್ದವರು 250 ಗ್ರಾಂ ಖರೀದಿಸುತ್ತಿದ್ದಾರೆ. ಕಳೆದ 4-5 ದಿನಗಳಿಂದ ಟೊಮ್ಯಾಟೊ ಬೆಲೆ ಹೆಚ್ಚಾಗಿದೆ, ಇದು ಜನರ ಜೇಬಿಗೆ ಸಾಕಷ್ಟು ಪರಿಣಾಮ ಬೀರುತ್ತಿದೆ ಎಂದು ಮಾರಾಟಗಾರರೊಬ್ಬರು ಹೇಳಿದರು.