ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಜಂಕ್ಷನ್ ಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರು ಇಡುವಂತೆ ಹಾಗೂ ಸಾವರ್ಕರ್ ಪುತ್ಧಳಿ ಸ್ಧಾಪಿಸುವಂತೆ ಒತ್ತಾಯಿಸಿ ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ವೈ ಶೆಟ್ಟಿಯವರಿಗೆ ಹಿಂದು ಜಾಗರಣ ವೇದಿಕೆ ಸುರತ್ಕಲ್ ನಗರ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಶಾಸಕರಿಗೆ ಆಗ್ರಹ ಪತ್ರವನ್ನು ನೀಡಿ ಸುರತ್ಕಲ್ ಜಂಕ್ಷನ್ ಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರು ಇಡುವಂತೆ ಹಾಗು ಸಾವರ್ಕರ್ ಪುತ್ಧಳಿ ಸ್ಧಾಪಿಸುವಂತೆ ವಿನಂತಿಸಲಾಯಿತು.
ಈ ವೇಳೆ ಹಿಂದು ಜಾಗರಣ ವೇದಿಕೆಯ ಸತೀಶ್ ಮುಂಚೂರು, ಪುಷ್ಪರಾಜ್ ಕುಳಾಯಿ, ದಿನೇಶ್ ಮುಂಚೂರು, ರಾಜಣ್ಣ ಕುಳಾಯಿ, ಬಬೀನ್ ಕಾಟಿಪಳ್ಳ, ರಕ್ಷಿತ್ ಇಡ್ಯ, ಅಲೋಕ್ ಪಣಂಬೂರು, ಕಿರಣ್ ಜನತಾ ಕಾಲೋನಿ, ಸೃಜನ್ ಕಟ್ಲ, ಧೀರಜ್ ಕೋಡಿಕೆರೆ ಹಲವರು ಉಪಸ್ಥಿತರಿದ್ದರು.
