ಮುಂಬಯಿ- ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗವು ಖ್ಯಾತ ಸಂಘಟಕ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅವರಿಗೆ `ಸಾರ್ವಭೌಮ’ ಗೌರವ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮವನ್ನು
ಸೆ. 10 ರಂದು ಶನಿವಾರ ಮಧ್ಯಾಹ್ನ 2:00 ರಿಂದ ವಿಶ್ವವಿದ್ಯಾಲಯದ ಕಲೀನಾ ಕ್ಯಾಂಪಸ್ಸಿನಲ್ಲಿರುವ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ
ಸಚಿವ ಸುನೀಲ್ ಕುಮಾರ್ ಅವರು ಈ ಗೌರವ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಿಪಾಡಿತ್ತಾಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಂಬಯಿಯ ಗಣ್ಯರ ಉಪಸ್ಥಿತಿಯಲ್ಲಿ ಈ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ. ಗೌರವಾನ್ವಿತ ಅತಿಥಿಗಳಾಗಿ ಸದಾಶಿವ ಶೆಟ್ಟಿ, ಕನ್ಯಾನ (ಆಡಳಿತ ನಿರ್ದೇಶಕ : ಹೇರಂಬ ಇಂಡಸ್ಟ್ರೀಸ್), ಆನಂದ ಶೆಟ್ಟಿ (ಆಡಳಿತ ನಿರ್ದೇಶಕ : ಆರ್ಗಾನಿಕ್ ಕೆಮಿಕಲ್ಸ್), ಚಂದ್ರಹಾಸ ಕೆ. ಶೆಟ್ಟಿ (ಅಧ್ಯಕ್ಷ : ಬಂಟರ ಸಂಘ, ಮುಂಬಯಿ), ಡಾ| ಸುರೇಶ್ ರಾವ್ (ಖ್ಯಾತ ವೈದ್ಯ : ಸಂಜೀವಿನಿ ಆಸ್ಪತ್ರೆ, ಮುಂಬಯಿ), ಹರೀಶ್ ಜಿ. ಅಮಿನ್ (ಅಧ್ಯಕ್ಷ : ಬಿಲ್ಲವರ ಎಸೋಸಿಯೇಶನ್, ಮುಂಬಯಿ), ಸುರೇಶ್ ಕಾಂಚನ್ (ಗೌರವ ಅಧ್ಯಕ್ಷ : ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ, ಹೋಬಳಿ, ಮುಂಬಯಿ), ರವಿ ಎಸ್. ಶೆಟ್ಟಿ (ಆಡಳಿತ ನಿರ್ದೇಶಕ : ಸಾಯಿ ಪ್ಯಾಲೇಸ್ ಗ್ರೂಪ್ ಆಫ್ ಹೋಟೇಲ್ಸ್) ಇವರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಪ್ರಧಾನ ಸಂಪಾದಕರಾಗಿ, ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಜಿ. ಎನ್. ಉಪಾಧ್ಯ ಹಾಗೂ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ, ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಶೋಕ ಪಕ್ಕಳ (ಪ್ರಧಾನ ಸಂಪಾದಕ : ಬಂಟರವಾಣಿ), ಪ್ರೇಮನಾಥ ಮುಂಡೂರು (ಸಂಪಾದಕ : ಬಂಟರವಾಣಿ), ಕರ್ನೂರು ಮೋಹನ್ ರೈ (ಸಂಘಟಕ : ಮುಂಬಯಿ), ಜಗನ್ನಾಥ ಬಾಳ (ಸದಸ್ಯ : ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು), ಕೊಲ್ಲಾಡಿ ಬಾಲಕೃಷ್ಣ ರೈ (ಮಾಜಿ ಕೋಶಾಧಿಕಾರಿ : ಜಾಗತಿಕ ಬಂಟರ ಸಂಘಗಳ ಒಕ್ಕೂಟ), ಡಾ. ದಿನೇಶ ಶೆಟ್ಟಿ, ರೆಂಜಾಳ (ಪತ್ರಕರ್ತ), ದಿನೇಶ್ ಕುಲಾಲ್ (ಪತ್ರಕರ್ತ : ಮುಂಬಯಿ) ಇವರು ಸಂಪಾದಕ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಿರೆ ವಿಶ್ವನಾಥ ಶೆಟ್ಟಿ (ಉಪಾಧ್ಯಕ್ಷ : ಜಾಗತಿಕ ಬಂಟರ ಸಂಘಗಳ ಒಕ್ಕೂಟ), ಜಯಕರ ಶೆಟ್ಟಿ, ಇಂದ್ರಾಳಿ (ಕಾರ್ಯದರ್ಶಿ : ಜಾಗತಿಕ ಬಂಟರ ಸಂಘ, ಒಕ್ಕೂಟ), ಸತೀಶ್ ಅಡಪ್ಪ ಸಂಕಬೈಲು (ಜೊತೆ ಕಾರ್ಯದರ್ಶಿ : ಜಾಗತಿಕ ಬಂಟರ ಸಂಘ, ಒಕ್ಕೂಟ), ರತ್ನಾಕರ ಶೆಟ್ಟಿ,
ಮುಂಡೂರು (ಉಪಾಧ್ಯಕ್ಷ : ಎಸ್. ಎಂ. ಶೆಟ್ಟಿ, ಶಿಕ್ಷಣ ಸಂಸ್ಥೆ, ಪೊವ್ಯಾ), ಉಳ್ಳೂರು ಮೋಹನದಾಸ ಶೆಟ್ಟಿ (ಕಾರ್ಯಾಧ್ಯಕ್ಷ : ಮಾತೃಭೂಮಿ ಕೋ ಆಪರೇಟಿವ್ ಸೊಸ್ಕಾಟಿ, ಬಂಟರ ಸಂಘ, ಮುಂಬಯಿ) ಪ್ರವೀಣ್ ಭೋಜ ಶೆಟ್ಟಿ (ನಿರ್ದೇಶಕ : ಜಾಗತಿಕ ಬಂಟರ ಸಂಘಗಳ ಒಕ್ಕೂಟ), ಡಾ. ಆರ್. ಕೆ. ಶೆಟ್ಟಿ, (ಗೌ. ಪ್ರ. ಕಾರ್ಯದರ್ಶಿ : ಬಂಟರ
ಸಂಘ, ಮುಂಬಯಿ), ಶಶಿಧರ ಶೆಟ್ಟಿ, ಇನ್ನಂಜೆ (ಅಧ್ಯಕ್ಷ : ತುಳುಕೂಟ, ವಸ್ಕಾ), ರವೀಂದ್ರ ಭಂಡಾರಿ (ಕಾರ್ಯಾಧ್ಯಕ್ಷ : ಬಂಟರವಾಣಿ) ಇವರು ಸಲಹಾ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವೂ ನಡೆಯಲಿದೆ ಎಂದು ಮುಂಬಯಿ ವಿಶ್ವವಿದ್ಯಾಲಯದ
ಪ್ರಕಟಣೆಯ ಮೂಲಕ ತಿಳಿಸಲಾಗಿದೆ.
