Home ಬ್ರೇಕಿಂಗ್ ನ್ಯೂಸ್ 🔥 ಭೀಕರ ಅಪಘಾತ; ನಮ್ಮಮ್ಮ ಸೂಪರ್ ಸ್ಟಾರ್ ಸ್ಪರ್ಧಿಯಾಗಿದ್ದ ಸಮನ್ವಿ ಸಾವು!

ಭೀಕರ ಅಪಘಾತ; ನಮ್ಮಮ್ಮ ಸೂಪರ್ ಸ್ಟಾರ್ ಸ್ಪರ್ಧಿಯಾಗಿದ್ದ ಸಮನ್ವಿ ಸಾವು!

0
275

ಬೆಂಗಳೂರು: ಟಿಪ್ಪರ್ ಲಾರಿ – ದ್ವಿಚಕ್ರ ವಾಹನ ಅಪಘಾತವಾಗಿ ತಾಯಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಾಜರಹಳ್ಳಿ ಬಳಿ ನಡೆದಿದೆ.

ಸಮನ್ವಿ(6) ಮೃತ ದುರ್ಧೈವಿ. ಸಮನ್ವಿ ಖಾಸಗಿ ವಾಹಿನಿ ಜನಪ್ರಿಯ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಯಾಗಿದ್ದಳು.

ದ್ವಿಚಕ್ರ ವಾಹನದಲ್ಲಿ ತಾಯಿ – ಮಗು ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ತೆರಳ್ತಿದ್ದಾಗ ಟಿಪ್ಪರ್ ಢಿಕ್ಕಿ ಹೊಡೆದು ಅಪಘಾತವಾಗಿದ್ದು, ಪರಿಣಾಮ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಅಪಘಾತದಲ್ಲಿ ಬಾಲಕಿಯ ತಾಯಿ ಅಮೃತಾ ನಾಯ್ಡು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮರಣೋತ್ತರ ಪರೀಕ್ಷೆಗೆ ಬಾಲಕಿ ಮೃತದೇಹ ಕಿಮ್ಸ್ ಗೆ ರವಾನಿಸಲಾಗಿದ್ದು, ಆರೋಪಿ ಟಿಪ್ಪರ್ ಲಾರಿ ಚಾಲಕನನ್ನು ಕೆ.ಎಸ್.ಲೇಔಟ್ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಮಾರಸ್ವಾಮಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here