ಉಡುಪಿ: ಹಿಂದು-ಮುಸ್ಲಿಮ್-ಕ್ರೈಸ್ತರು ಸೇರಿ ಇಂದು ಗಾಂಧಿ ಜಯಂತಿ ಪ್ರಯುಕ್ತ “ಸಬ್ ಕೋ ಸನ್ಮತಿ ದೆ ಭಗವಾನ್” ಧ್ಯೇಯ ವಾಕ್ಯದಡಿಯಲ್ಲಿ ಸದ್ಭಾವನ ನಡಿಗೆ ಕಾರ್ಯಕ್ರಮ ಜರುಗಿತು.
ನಾರಾಯಣ ಗುರು ಸಭಾ ಭವನದಿಂದ ಆರಂಭಗೊಂಡು ಜಾಮೀಯ ಮಸೀದಿ ಉಡುಪಿ, ಮದರ್ ಆಫ್ ಸರೋಸ್ ಚರ್ಚ್ ಮೂಲಕ ಅಜ್ಜರ್’ಕಾಡ್ ಗಾಂಧಿ ಪ್ರತಿಮೆ ಬಳಿ ಸಮಾಪನಗೊಂಡಿತು. ಕಾರ್ಯಕ್ರಮದ ಆರಂಭದಲ್ಲಿ ಮಾಧವ ಬನ್ನಂಜೆಯವರು ರಾಷ್ಟ್ರ ಧ್ವಜವನ್ನು ಸಹಬಾಳ್ವೆ ಅಧ್ಯಕ್ಷರಾದ ಅಮೃತ್ ಶೆಣೈ ಅವರಿಗೆ ಹಸ್ತಾಂತರಿಸಿ ನಡಿಗೆಗೆ ಚಾಲನೆ ನೀಡಲಾಯಿತು. ನಂತರ ಜಾಮೀಯಾ ಮಸೀದಿ ಬಳಿ ಧರ್ಮಗುರುಗಳಾದ ಅಬ್ದುರ್ರಶೀದ್ ನದ್ವಿ ಸೌಹಾರ್ದ ಸಂದೇಶ ನೀಡಿದರು.
ಪ್ರಶಾಂತ್ ಜತ್ತನ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ.ಫಣಿರಾಜ್, ರಮೇಶ್ ಕಾಂಚನ್, ಸುಂದರ್ ಮಾಸ್ತರ್, ಯಾಸೀನ್ ಮಲ್ಪೆ, ಇದ್ರಿಸ್ ಹೂಡೆ, ಮುಹಮ್ಮದ್ ಮೌಲ, ಇರ್ಷಾದ್ ನೇಜಾರ್, ಝಫ್ರುಲ್ಲಾ ನೇಜಾರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
